Belagavi

ಇತಿಹಾಸದ ಪುಟಗಳಲ್ಲಿ ಬೆಳಗಾವಿ ಬಾಲಕಿಯ ವಿಶ್ವ ದಾಖಲೆ: 50 ಐತಿಹಾಸಿಕ ಘಟನೆಗಳ ಸ್ಮರಣೆ!

Share

ಬೆಳಗಾವಿಯ ಮರಾಠಾ ಮಂಡಲ್ ಶಾಲೆಯ ವಿದ್ಯಾರ್ಥಿನಿಯೊಬ್ಬಳು ತನ್ನ ಅದ್ಭುತ ನೆನಪಿನ ಶಕ್ತಿಯ ಮೂಲಕ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ. ಕೇವಲ ಸೆಕೆಂಡುಗಳ ಅಂತರದಲ್ಲಿ ಇತಿಹಾಸವನ್ನೇ ಬಿಚ್ಚಿಟ್ಟ ಈ ಪುಟ್ಟ ಬಾಲಕಿಯ ಅಸಾಧಾರಣ ಸಾಧನೆ ಮಾಡಿದ್ದಾಳೆ.

ಬೆಳಗಾವಿಯ ಮರಾಠಾ ಮಂಡಲ್ ಇಂಗ್ಲಿಷ್ ಮೀಡಿಯಂ ಶಾಲೆಯ 6ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಪ್ರಾರ್ಥನಾ ಸುರೇಶ್ ಮಾಲಗಿ, ಅತೀ ಕಡಿಮೆ ಅವಧಿಯಲ್ಲಿ 50 ಐತಿಹಾಸಿಕ ಘಟನೆಗಳನ್ನು ಅವುಗಳ ವರ್ಷದೊಂದಿಗೆ ನಿರರ್ಗಳವಾಗಿ ಸ್ಮರಿಸುವ ಮೂಲಕ ಜಾಗತಿಕ ದಾಖಲೆ ನಿರ್ಮಿಸಿದ್ದಾಳೆ. ಕೇವಲ 1 ನಿಮಿಷ, 23 ಸೆಕೆಂಡ್ ಹಾಗೂ 51 ಸೆಂಟಿಸೆಕೆಂಡ್‌ಗಳಲ್ಲಿ ಈ ಸಾಧನೆ ಮಾಡಿರುವ ಪ್ರಾರ್ಥನಾಳ ಈ ಅಭೂತಪೂರ್ವ ಯಶಸ್ಸಿಗೆ ಶಾಲೆಯ ಅಧ್ಯಕ್ಷರಾದ ಡಾ. ರಾಜಶ್ರೀ ನಾಗರಾಜು, ಪ್ರಾಂಶುಪಾಲೆ ಗಾಯತ್ರಿ ಆರ್.

 

ಸೂರ್ಯವಂಶಿ ಹಾಗೂ ಉಪ ಪ್ರಾಂಶುಪಾಲ ಗಿರೀಶ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪೋಷಕರು ಹಾಗೂ ಶಿಕ್ಷಕ ವೃಂದದ ಮಾರ್ಗದರ್ಶನದಲ್ಲಿ ಮೂಡಿಬಂದ ಈ ವಿಶ್ವ ದಾಖಲೆಯು ಬೆಳಗಾವಿ ಜಿಲ್ಲೆಗೆ ಅಷ್ಟೇ ಅಲ್ಲದೆ ಇಡೀ ರಾಜ್ಯಕ್ಕೆ ಹೆಮ್ಮೆಯನ್ನು ತಂದಿದೆ

Tags:

error: Content is protected !!