ರಸ್ತೆಯ ಬದಿಯ ಕಂಟ್ಟಿಯಲ್ಲಿ ಅರೇಬರೇ ಬಟ್ಟೆಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿರುವ ಘಟನೆ ಧಾರವಾಡ ಹೊರವಲಯದ ಸವದತ್ತಿ ರಸ್ತೆಯ ಅಷ್ಟಗಿ ಜಿನ್ನಿಂಗ್ ಫ್ಯಾಕ್ಟರಿ ಸಮೀಪ ನಡೆದಿದೆ.


ಧಾರವಾಡ ಸವದತ್ತಿ ರಸ್ತೆಯ ಅಷ್ಟಗಿ ಜಿನ್ನಿಂಗ್ ಫ್ಯಾಕ್ಟರಿ ಸಮೀಪ ಮಹಿಳೆಯ ಶವ ಪತ್ತೆಯಾಗಿದೆ. ಅರೇ ಬರೇ ಬಟ್ಟೆಯಲ್ಲಿ ಕಟ್ಟಿಯ ನಡುವೆ ಮಹಿಳೆಯ ಮೃತ ದೇಹವು ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಹಿಟ್ ಆ್ಯಂಡ್ ರನ್ ಅಪಘಾತದಿಂದ ಮಹಿಳೆ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದ ಮೂಲದ ಮಹಿಳೆ ಎಂದು ಹೇಳಲಾಗುತ್ತಿದೆ. ಮೃತ ಮಹಿಳೆ ಹೆಸರು ತಿಳಿದು ಬಂದಿಲ್ಲ. ಪೊಲೀಸರ ಪ್ರಾಥಮಿಕ ತನಿಖೆಯ ಬಳಿಕ ಮಹಿಳೆಯ ಹೆಸರು ಹಾಗೂ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ.
