DEATH

ವಿಲಾಸ್ ಮೊರೆ ಹೃದಯಾಘಾತದಿಂದ ನಿಧನ

Share

ಖಾನಾಪೂರ ಪಟ್ಟಣದ ನಿಂಗಾಪೂರ ಗಲ್ಲಿಯ ನಿವಾಸಿ ಹಾಗೂ ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ವಿಲಾಸ್ ಪರಶರಾಮ ಮೊರೆ (70) ಅವರು ಇಂದು ಬುಧವಾರ ಮುಂಜಾನೆ 6 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಟ್ಟಣ ಪಂಚಾಯಿತಿಯ ಸ್ಟ್ಯಾಂಡಿಂಗ್ ಕಮಿಟಿ ಅಧ್ಯಕ್ಷರಾಗಿ ಹಾಗೂ ಪಂಚ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು, ಪಟ್ಟಣದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 2.00 ಗಂಟೆಗೆ ಖಾನಾಪೂರದ “ಮೋಕ್ಷಧಾಮ” ಶ್ಮಶಾನ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:

error: Content is protected !!