ವಿಬಿ ಜಿ ರಾಮ್ ಜಿನಲ್ಲಿ ರಾಮನಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿಬಿ ಜಿ ರಾಮ್ ಜಿನಲ್ಲಿ ರಾಮ ಇಲ್ಲ, ದಶರಥ ರಾಮನೂ ಇಲ್ಲ, ಸೀತಾ ರಾಮನು ಇಲ್ಲ ಎಂದಿದ್ದಾರೆ. ಅದರಲ್ಲಿ ರಾಮಾಯಣದ ರಾಮನೂ ಇಲ್ಲ, ಸಿದ್ದರಾಮನೂ ಇಲ್ಲ ಅಂತ ವ್ಯಂಗ್ಯವಾಡಿದ್ರು. ನಾವು ರಾಜ್ಯಪಾಲರ ವಿರುದ್ಧವಿಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ಇರುವವರು ಅಂತ ಸರ್ಕಾರದ ಭಾಷಣಕ್ಕೆ ಸಿಎಂ ಸಮರ್ಥನೆ ನೀಡಿದ್ರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುತ್ತ ಜಂಟಿ ಸದನಗಳನ್ನು ಉದ್ಧೇಶಿಸಿ ಅವರು ಮಾತನಾಡಿದರು. ಜನ ಅವರ ಪ್ರತಿನಿಧಿಯಾಗಿ ನಮ್ಮನ್ನ ಆಯ್ಕೆ ಮಾಡಿದ್ದಾರೆ ಎಂದ ಸಿಎಂ, ಅವರ ಹಿತಕಾಪಾಡಲಿ ಎಂದು ಮಾಡಿದ್ದು. ನಮ್ಮ ಭಿನ್ನಾಬಿಪ್ರಾಯಗಳು ಏನೇ ಇರಬಹುದು. ಆದರೆ ನಮ್ಮ ಐಡಿಯಾಲಜಿ ಬೇರೆ, ನಿಮ್ಮದು ಬೇರೆ. ನಿಮ್ಮದು ನಿಮಗೆ, ನಮ್ಮದು ನಮಗೆ. ನೀವು ನಮ್ಮ ಐಡಿಯಾಲಜಿ ಒಪ್ಪಬೇಕಿಲ್ಲ, ಜೆಡಿಎಸ್ ಐಡಿಯಾಲಜಿ ಒಪ್ಪಬೇಕಿಲ್ಲ. ಆದರೆ ಯಾರೂ ಸಂವಿಧಾನದ ವಿರೋಧ ಮಾಡುವಂತಿಲ್ಲ ಅಂತ ಸಿಎಂ ಹೇಳಿದ್ರು.
ರಾಜ್ಯಪಾಲರು ಮೂಲತಃ ಒಳ್ಳೆಯವರು. ನಾವು ರಾಜ್ಯಪಾಲರ ವಿರುದ್ಧವಿಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ಇರುವವರು ಅಂತ ಸಿಎಂ ಹೇಳಿದ್ರು. ವಿಬಿ ಜಿ ರಾಮ್ ಜಿನಲ್ಲಿ ರಾಮನಿಲ್ಲ, ದಶರಥ ರಾಮನೂ ಇಲ್ಲ, ಸೀತಾ ರಾಮನೂ ಇಲ್ಲ. ರಾಮಾಯಣದ ರಾಮನೂ ಇಲ್ಲ, ಸಿದ್ದರಾಮನೂ ಇಲ್ಲ ಅಂತ ಸಿಎಂ ವ್ಯಂಗ್ಯವಾಡಿದ್ರು.
ಸಂವಿಧಾನದ 176ನೇ ವಿಧಿ ಪ್ರಕಾರ ರಾಜ್ಯಪಾಲರು ಭಾಷಣ ಓದಬೇಕಿತ್ತು. ಓದದಿದ್ದರೆ ಅದು ಸಂವಿಧಾನ ಬಾಹಿರ ಅಂತ ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ರು. ಮನರೇಗಾ ಬಗ್ಗೆ ಕುಮಾರಸ್ವಾಮಿ ಗ್ರಾಮೀಣ ಜನರ ಸಂಜೀವಿನಿ ಅಂತ ಹೇಳಿದ್ರು. ಈಗ ಬಿಜೆಪಿಯವ್ರ ಜೊತೆ ಸೇರಿದ್ಮೇಲೆ ಕೂಡಿಕೆ ಆಗಿದೆ ಎಂದು ಕೈ ಕೈ ಸೇರಿಸಿ ಸಿಎಂ ವ್ಯಂಗ್ಯವಾಡಿದ್ರು.
ರಾಜ್ಯಪಾಲರ ನಡೆ ಬಗ್ಗೆ ಸಂವಿಧಾನದ ಕಲಂ 176, 163 ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಶಾಸಕ ಸುನಿಲ್ ಕುಮಾರ್ ಅವರು ‘ಸರ್ಕಾರ ಆಡಳಿತ ಹದಗೆಟ್ಟಿದೆ ಮತ್ತು ಸಂವಿಧಾನರಹಿತ ಸರ್ಕಾರ’, ‘ಅಸಹಾಯಕ ಮುಖ್ಯಮಂತ್ರಿ’ ಎಂದಿದ್ದಾರೆ. ಆದರೆ ಕೆಲವೊಮ್ಮ ಅಸತ್ಯದ ಎದುರು ಸತ್ಯ ಅಸಹಾಯಕವಾಗುತ್ತದೆ. ಜನರು ನಮ್ಮನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ವಿರೋಧಪಕ್ಷದವರ ಮತ್ತು ಸರ್ಕಾರದವರ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ ಎಂದರು.
ಇನ್ನು ಸದನದಲ್ಲಿ ತಮ್ಮ ಪ್ರಶ್ನೆಗಳಿಗೆ ಸರ್ಕಾರ ಸರಿಯಾದ ಉತ್ತರವನ್ನು ನೀಡುತ್ತಿಲ್ಲವೆಂದು ಪ್ರತಿಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿ ಸಭಾಗೃಹದಿಂದ ಹೊರನಡೆದರು.
