12ನೇ ಶತಮಾನದ ಸಮಾಜದಲ್ಲಿ ಬಸವಣ್ಣವರು ಹಾಗೂ ಎಲ್ಲಾ ಶರಣರು ಜಾತಿಯತೆ ಹೋಗಲಾಡಿಸಿದರು. ಮಾನವ ಕುಲ ಒಂದೇ ಎಂದು ಎಲ್ಲಾ ಮಾನವರು ಒಂದೇ ಎಂದು ಕಾಯಕ ಶರಣರು ಸಾರಿದರು ಎಂದು ಅಂಜುಮನ್ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಎಚ್.ಆಯ್ . ತಿಮ್ಮಾಪುರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಫೆ.10) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಅಂಗ ಪೆದ್ದಿಯವರ ಜಯಂತಿ ಉತ್ಸವ-2026ರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುದರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದರು ಮಾದರ ಚೆನ್ನಯ್ಯ, ಕಾಯಕವೇ ಕೈಲಾಸ ಎಂಬ ಮಂತ್ರ ರೀತಿ ಜೀವನ ಮಾಡಿದರು, ಚೋಳ ಅರಸನ ಮನೆಯ ಮುಂದೆ ಅರಸನ ಭೋಜನ ಬಿಟ್ಟು ಚನ್ನಯ್ಯನ ಭಕ್ತಿ ಮೆಚ್ಚಿ ಅಂಬಅಯನ್ನ ಶಿವ ಸೇವಿಸುತ್ತಾನೆ. ಇದನ್ನು ಕಂಡ ಚೋಳ ಅರಸ ಚನ್ನಯ್ಯನ ಮನೆಗೆ ಹೋಗಿ ಅವನ ಕಾಲಿಗೆ ನಮಸ್ಕರಿಸುತ್ತಾನೆ. ಇದು ಚನ್ನಯ್ಯರವರ ನಿಜವಾದ ಭಕ್ತಿ ಎಂದು ಹೇಳಿದರು.
ದೇವರಿಗೆ
ಹುಟ್ಟನಿಂದ ಯಾರು ನೀಚರು ಅಲ್ಲ ಅವನ ನಡತೆಯಿಂದ ಅವರ ಕುಲ ನಿರ್ಧಾರವಾಗುತ್ತದೆ ಎಂದು ಶರಣರು ಪ್ರತಿಪಾದಿಸಿದ್ದರು. ಕಾಯಕವಿಲ್ಲದ, ಶ್ರಮವಿಲ್ಲದವರು ಶರಣರಲ್ಲ ಎಂದು ಹೇಳದರು. ಹತ್ತಿರವಾಗಬೇಕಾದರೆ ತಮ್ಮ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡಬೇಕು.
ಸತ್ಯ ಶುದ್ಧ ಕಾಯಕವನ್ನು ಮಾಡಬೇಕು ಶರಣರಿಗೆ ಶಿವನಿಗೂ ಪ್ರಶ್ನೆ ಮಾಡುವ ಶಕ್ತಿ ಇತ್ತು. ಸುಖಕ್ಕಾಗಿ ಮಾಡಿದ ಭಕ್ತಿ ನಿಜವಲ್ಲ ಎಂದು ಹೇಳಿದರು.
ಡೋಹರ ಕಕ್ಕಯ್ಯ ಜಾತೀಯತೆಯನ್ನು ಮೆಟ್ಟಿ ನಿಂತವರು:
ದೇವ ಮಾನವ ಎಂದು ಕರೆಯಿಸಿಕೊಂಡ ಮಹಾನ್ ಶರಣರು ಎಲ್ಲಾ ಸಮುದಾಗಳಿಗೆ ಸೇರಿದವರು ಇವರನ್ನು ಕೇವಲ ಒಂದೇ ಕುಲಗಳಿಗೆ ಸೀಮಿತ ಮಾಡಬಾರದು. ಶರಣರ ಪರಿಚಯ ಎಲ್ಲರಿಗೂ ಆಗಬೇಕು. ಶರಣರಲ್ಲಿಯೇ ಮಹಾನ್ ಶರಣ್ ಡೋಹರ ಕಕ್ಕಯ್ಯ ಗುಡಿಯನ್ನು ದಿಕ್ಕರಿಸಿ ದೇಹವೇ ದೇಗುಲ ಎಂದು ಹೇಳದರು ಮಾನವನಿಗೆ ಗೌರವ ಕೊಡುವುದೇ ನಿಜವಾದ ಭಕ್ತಿ ಎಂದು ಸಾಮಾಜಿಕ ಕೆಡುಕನ್ನು ಟೀಕಿಸಿದರು.
ಇವನಾರವ ಇವನಾರವ ಇವನಮ್ಮವ ಇವನಮ್ಮವ ಹೋಗಿ ಇವ ಯಾರವ ಎಂಬಾ ಸ್ಥಿತಿ ಬಂದಿದೆ, ಒಬ್ಬ ಕಳ್ಳನಾದರೂ ಕಲ್ಲೇ ಅಂಗ ವೆಂದು ಪೂಜಿಸಿದ ಉರಿಲಿಂಗ ಪೆದ್ದಿ ಭಕ್ತಿಗೆ ಶಿವ ಮೆಚ್ಚುತ್ತಾನೆ, 360 ವಚನಗಳನ್ನು ಬರೆದು ಸಮಾಜದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತಾರೆ. ಉರಿಲಿಂಗ ಪೆದ್ದಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಅಕ್ಷರ ಜ್ಞಾನ ಇಲ್ಲದಿದ್ದರೂ ಎಲ್ಲರಿಗೂ ಮಾದರಿಯಾದ ವ್ಯಕ್ತಿ ಸಮಗಾರ ಹರಳಯ್ಯ ಬಸವಣ್ಣನವರಿಗೆ ತೊಡೆಗಳ ಚರ್ಮದ ಪಾದವನ್ನು ಮಾಡಿ ನೀಡಿದ ಮಹಾನ್ ಶರಣ ಇವರು ಅಂದಿನ ಕಾಲದಲ್ಲಿ ಅಂತರ್ಜಾತಿ ವಿವಾಹ ಮಾಡಿ ಎಲ್ಲರಿಗೂ ಮಾದರಿಯಾದ ಮಹಾನ್ ಶರಣರು ಸಮಗಾರ ಹರಳಯ್ಯ.
ಎಲ್ಲಾ ಸಮಾಜದ ಜನರು ಶುದ್ಧಿಕರಣವಾಗಬೇಕು, ಏಕೀಕರಣವಾಗಬೇಕು, ನವೀಕರಣವಾಗಬೇಕು ಜಾಗತೀಕರಣ ವಾಗಬೇಕು ಹಾಗೂ ಸಬಲೀಕರಣವಾಗಬೇಕು ನಾವು ಎಲ್ಲರೂ ಒಂದಾಗಬೇಕು ಎಲ್ಲಾ ಶರಣರು ವಚನ ಸಾಹಿತ್ಯಗಳು ಎಲ್ಲರಿಗೂ ತಲುಪಬೇಕು ಎಂದು ತಮ್ಮ ಆಶಯವನ್ನು ಡಾ. ಎಚ್ .ಆಯ್ . ತಿಮ್ಮಾಪುರ ವ್ಯಕ್ತ ಪಡಿಸಿದರು.
ಮನುಕುಲ ಉಳಿಯಲು ಎಲ್ಲರೂ ಇಂಥಹ ಶರಣರ ವಚನಗಳನ್ನು ಪಾಲಿಸಬೇಕು ಸಮ ಸಮಾಜದ ನಿರ್ಮಾಣ ವಾಗಬೇಕು ಎಂದು ಬಸವರಾಜ ರೊಟ್ಟಿ ಹೇಳದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಮಲ್ಲೇಶ್ ಚೌಗುಲೆ, ಅನಂತ ಕುಮಾರ ಬ್ಯಾಕೂಡ, ಭೀಮರಾವ್ ಪವಾರ್, ವಿಠಲ ಪೋಳ, ಕರೆಪ್ಪ ಗುಡೆನ್ನವರ, ಶರಣ ಸಮುದಾಯದ ಇನ್ನಿತರರು ಉಪಸ್ಥಿತರಿದ್ದರು.
