Hukkeri

ಮದಿಹಳ್ಳಿ ಪಿ ಕೆ ಪಿ ಎಸ್ ಅದ್ಯಕ್ಷ – ಉಪಾಧ್ಯಕ್ಷರ ಅವಿರೋಧ ಆಯ್ಕೆ.

Share

ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅದ್ಯಕ್ಷ ರಾಗಿ ಗುರುಸಿದ್ದ ಮಾಯಪ್ಪಾ ಬಾಗಿ ಮತ್ತು ಉಪಾಧ್ಯಕ್ಷ ರಾಗಿ ಶ್ರೀಮತಿ ವಂದನಾ ಸಿದ್ದಪ್ಪಾ ಬಾಗಿ ಅವಿರೋಧ ಆಯ್ಕೆ ಜರುಗಿತು.

ಇತ್ತೀಚಿಗೆ ಬೆಳಗಾವಿ ಡಿ ಸಿ ಸಿ ಬ್ಯಾಂಕ ಚುನಾವಣೆಯಲ್ಲಿ ಡಿಲಿಗೇಟ್ಸ ಕೋಡುವ ಸಂದರ್ಭದಲ್ಲಿ ಮದಿಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘ ಮಾಜಿ ಸಂಸದ ರಮೇಶ ಕತ್ತಿ ಮತ್ತು ಸಚಿವ ಸತೀಶ ಜಾರಕಿಹೋಳಿ ನಡುವಿನ ಪ್ರತಿಷ್ಟೆಯಿಂದ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿ ಗಮನ ಸೆಳೆದ ಸಹಕಾರಿ ಸಂಸ್ಥೆಯಲ್ಲಿ ಇಂದು ಅದ್ಯಕ್ಷರಾಗಿ ಗುರುಸಿದ್ದ ಬಾಗಿ ಮತ್ತು ಉಪಾಧ್ಯಕ್ಷ ರಾಗಿ ಶ್ರೀಮತಿ ವಂದನಾ ಬಾಗಿ ಅವಿರೋಧವಾಗಿ ಆಯ್ಕೆ ಯಾಗುವ ಮೂಲಕ ಅಚ್ಚರಿ ಮೂಡಿಸಿದೆ.
ಇತ್ತೀಚಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ವಿಠ್ಠಲ ವಾಳಕಿ, ಕಾಡಪಗಪಾ ಕುರಬೇಟ, ಗೋಪಾಲ ಬಾಗಿ, ತಾನಾಜಿ ಹೊಸೂರಿ, ರಾಮಚಂದ್ರ ಬನ್ನನವರ, ಪಾತಿಮಾ ಬಳಿಗಾರ, ಸಿದ್ರಾಮೇಶ್ವರ ಜಿರಲಿ,ನಾಮದೇವ ಪಾಂಡ್ರೆ ಬಹುಮತದಿಂದ ಆಯ್ಕೆಯಾಗಿದ್ದರು.

ಎಲ್ಲ ಆಡಳಿತ ಮಂಡಳಿ ಸದಸ್ಯರನ್ನು ಗ್ರಾಮದ ವತಿಯಿಂದ ಸತ್ಕರಿಸಲಾಯಿತು
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಎನ ಎಲ್ ಹುಲಕುಂದ,ನ್ಯಾಯವಾದಿ ಬಿ ಬಿ ಬಾಗಿ, ಅಂಬರಿಷ ಬನ್ನಕ್ಕಗೋಳ, ವಿಜಯ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!