ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿ ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಸಿದ್ದಪ್ಪ ಇಮಡೇರ್ (22) ಮತ್ತು ಪ್ರಜ್ವಲ್ (21) ಮೃತ ದುರ್ದೈವಿಗಳು, ಇವರು ಬೆಳಗಾವಿ ಜಿಲ್ಲೆಯ ಕಲ್ಲೋಳ ಗ್ರಾಮದ ನಿವಾಸಿಗಳು. ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಗೆ ಬಂದಿದ್ದ ವೇಳೆ, ಈಜು ಬಾರದೇ ಇದ್ದರೂ ನದಿಯಲ್ಲಿ ಇಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

