ಮೆಗಾಮಾರ್ಟ್‌ಗೆ ಬಂದಿದ್ದ ಯುವಕರಿಬ್ಬರು ಬೆಲೆಬಾಳುವ ವಸ್ತುಗಳನ್ನ ಕದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಗರವಾಲ್ ಮೆಗಾ ಮಾರ್ಟ್‌ಗೆ ಖರೀದಿ ನೆಪದಲ್ಲಿ ಬಂದ ಯುವಕರು ಬೆಲೆಬಾಳುವ ಚಾಕೋಲೆಟ್, ಬೂಸ್ಟ್ ಡಬ್ಬಿ ಸೇರಿ ಬೆಲೆಬಾಳುವ ಗೃಹ ಉಪಯೋಗಿ ಕದ್ದು ತಮ್ಮ ಒಳ ಉಡುಪುಗಳಲ್ಲಿ ಅಡಗಿಸಿಕೊಂಡಿದ್ದಾರೆ. ಬಳಿಕ ಕಡಿಮೆ ವಸ್ತುವಿಗೆ ಪೇ ಮಾಡಿ ತೆರಳಿದ್ದಾರೆ. ಅನುಮಾನಗೊಂಡು ನೋಡಿದಾಗ ಸಿಸಿಟಿವಿಯಲ್ಲಿ ಯುವಕರ ಕರಾಮತ್ತು ಸೆರೆಯಾಗಿದ್ದು ಕಂಡು ಬಂದಿದೆ. ಸುಮಾರು 6 ಸಾವಿರ ಬೆಲೆಯ ವಸ್ತುಗಳ ಕದ್ದೊಯ್ದಿದ್ದಾರೆ ಎನ್ನಲಾಗಿದೆ…

