ಬೆಳಗಾವಿ ಮಹಾನಗರದ ಜನತೆಗೆ ಅಂತ್ಯಕ್ರಿಯೆಯ ವೇಳೆ ಅನುಕೂಲವಾಗುವಂತೆ 2 ಹೊಸ ಮುಕ್ತಿ ವಾಹನ ಶವವಾಹಕಗಳನ್ನು ಇಂದು ಶಾಸಕದ್ವಯರು ಲೋಕಾರ್ಪಣೆಗೊಳಿಸಿದರು.


ಬೆಳಗಾವಿ ಮಹಾನಗರದ ಜನತೆಗೆ ಅಂತ್ಯಯಾತ್ರೆಗೆ ಅನುಕೂಲವಾಗುವಂತೆ ಮಹಾನಗರ ಪಾಲಿಕೆಯ ವತಿಯಿಂದ ಖರೀದಿಸಲಾದ ನೂತನ ಅತ್ಯಾಧುನಿಕ ಮುಕ್ತಿ ವಾಹನಗಳನ್ನು ಇಂದು ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ಜೋಷಿ, ಉತ್ತರ ಶಾಸಕ ಆಸೀಫ್ ಸೇಠ್, ದಕ್ಷಿಣ ಶಾಸಕ ಅಭಯ್ ಪಾಟೀಲ್, ಆಯುಕ್ತರಾದ ಕಾರ್ತಿಕ್ ಎಂ., ಸೇರಿದಂತೆ ನಗರಸೇವಕರು ಇನ್ನುಳಿದ ಗಣ್ಯರ ಉಪಸ್ಥಿತಿಯಲ್ಲಿ ಹಸಿರು ನಿಶಾನೆ ತೋರಿಸಿ ಲೋಕಾರ್ಪಣೆಗೊಳಿಸಲಾಯಿತು.
ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ 2 ಅತ್ಯಾಧುನಿಕ ಮುಕ್ತಿವಾಹನ ಶವವಾಹಕಗಳನ್ನು ಖರೀದಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೆರಡು ವಾಹನಗಳನ್ನು ಖರೀದಿಸುವ ಚಿಂತನೆಯಿದೆ. ಅಧಿಕಾರಿಗಳು ಈಗಾಗಲೇ ಕೆಲಸ ನಿರ್ವಹಿಸುತ್ತಿದ್ದು, ಡೈರಿ ಮೆಂಟೆನ್ ಮಾಡಿ ವಾಹನಗಳನ್ನು ನಿರ್ವಹಿಸಬೇಕು. ಎಲ್ಲರೂ ಒಗ್ಗೂಡಿ ಬೆಳಗಾವಿಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಬೆಳಗಾವಿಗರ ಬೇಡಿಕೆಯಂತೆ ಹೊಸ ಅತ್ಯಾಧುನಿಕ ಮುಕ್ತಿವಾಹನ ಶವವಾಹಕಗಳನ್ನು ಖರೀದಿಸಲಾಗಿದೆ. ಆದರೇ, ಮಹಾನಗರ ಪಾಲಿಕೆಯವರು ಅವುಗಳನ್ನು ಸರಿಯಾಗಿ ನಿರ್ವಹಿಸಬೇಕು. ಕಳೆದ ಬಾರಿ ಎಂಜಿನ್ ಸೀಜ್ ಆಗಿದೆ. ಈ ರೀತಿ ಮರುಕಳಿಸಿದರೇ, ನೀವೇ ಹೊಣೆಯಾಗುತ್ತೀರಿ. ನಿಮ್ಮ ವೇತನದಲ್ಲೇ ಅವುಗಳನ್ನು ಕಡಿತಗೊಳಿಸಲಾಗುವುದೆಂದು ಅಧಿಕಾರಿಗಳಿಗೆ ಸೂಚಿಸಿದರು. ಮುಂಬರುವ ದಿನಗಳಲ್ಲಿ ದಕ್ಷಿಣದಲ್ಲಿ ಶಾಸಕರ ಅನುದಾನದಲ್ಲಿ ಇನ್ನೊಂದು ವಾಹನವನ್ನು ಸಮರ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಇನ್ನುಳಿದವರು ಉಪಸ್ಥಿತರಿದ್ಧರು.
