BELAGAVI

‘ನಶಾ ಮುಕ್ತ ಭಾರತ’ ಅಭಿಯಾನ’ದ ಉದ್ಧೇಶ

Share

ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ ಧ್ಯೇಯದೊಂದಿಗೆ ಭಾರತ ಸರ್ಕಾರದ ‘ನಶಾ ಮುಕ್ತ ಭಾರತ’ ಅಭಿಯಾನದ ಅಂಗವಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ದಿಶಾಭೋಧ್ ಫೌಂಡೇಶನ್ ಮತ್ತು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಸಹಯೋಗದೊಂದಿಗೆ ಫೆಬ್ರವರಿ 28ರಂದು ಬೆಳಗಾವಿಯಲ್ಲಿ ಬೃಹತ್ ವಾಕಥಾನ್ ಹಮ್ಮಿಕೊಂಡಿದೆ ಎಂದು ಡಾ. ಲಕ್ಷ್ಮಣ್ ಅರಮನಿ ಅವರು ಹೇಳಿದರು.

ಬೆಳಗಾವಿಯಲ್ಲಿ ಕರೆಲಾಗಿದ್ಧ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿ ಅವರು, ಭಾರತ ಸರ್ಕಾರದ ‘ನಶಾ ಮುಕ್ತ ಭಾರತ’ ಅಭಿಯಾನದ ಅಂಗವಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ದಿಶಾಭೋಧ್ ಫೌಂಡೇಶನ್ ಮತ್ತು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಸಹಯೋಗದೊಂದಿಗೆ ಫೆಬ್ರವರಿ 28ರಂದು ಬೆಳಗಾವಿಯಲ್ಲಿ ಬೃಹತ್ ವಾಕಥಾನ್ ಹಮ್ಮಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಿಗ್ಗೆ 7:30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕುಲಪತಿ ಡಾ. ಬಿ.ಸಿ. ಭಗವಾನ್ ನೇತೃತ್ವದಲ್ಲಿ ನಡೆಯಲಿರುವ ಈ ಮೆರವಣಿಗೆಯು ಚೆನ್ನಮ್ಮ ವೃತ್ತದ ಮೂಲಕ ಹಾದು ಸರ್ದಾರ್ ಮೈದಾನದವರೆಗೆ ಸಾಗಲಿದೆ ಎಂದರು.

ಡಾ. ವಿನಯ್ ಮೋಹನ್ ಅವರು ಈ ಅಭಿಯಾನದಲ್ಲಿ ಜಿಲ್ಲೆಯ ಒಟ್ಟು 57 ಪ್ರತಿಷ್ಠಿತ ಆರೋಗ್ಯ ವಿಜ್ಞಾನ ಕಾಲೇಜುಗಳು ಭಾಗವಹಿಸುತ್ತಿವೆ. ಪ್ರಮುಖವಾಗಿ ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಕೆ.ಎಲ್.ಇ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್, ಮರಾಠಾ ಮಂಡಲ್ ದಂತ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲೆಯ ವಿವಿಧ ಆಯುರ್ವೇದ, ಹೋಮಿಯೋಪತಿ, ಫಿಸಿಯೋಥೆರಪಿ ಮತ್ತು ಫಾರ್ಮಸಿ ಕಾಲೇಜುಗಳ ಸುಮಾರು 6000 ವಿದ್ಯಾರ್ಥಿಗಳು ಹಾಗೂ 500ಕ್ಕೂ ಹೆಚ್ಚು ಅಧ್ಯಾಪಕರು ಭಾಗವಹಿಸಲಿದ್ದಾರೆ. ಶೈಕ್ಷಣಿಕ ಪ್ರದರ್ಶನಗಳು ಮತ್ತು ಘೋಷಣೆಗಳ ಮೂಲಕ ಮಾದಕ ವ್ಯಸನವು ಕುಟುಂಬ ಮತ್ತು ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಲಿದ್ದಾರೆ ಎಂದರು.

ಡಾ. ರವಿ ಪಾಟೀಲ್ ಅವರು, ಮಾದಕ ದ್ರವ್ಯ ಮುಕ್ತ ಶೈಕ್ಷಣಿಕ ಕ್ಯಾಂಪಸ್ ನಿರ್ಮಾಣದ ಜೊತೆಗೆ, ಈ ವಾಕಥಾನ್ ಮಾನವ ಅಂಗಾಂಗ ದಾನದ ಮಹತ್ವವನ್ನು ಸಾರಲಿದೆ. “ಒಬ್ಬ ಮೃತ ದಾನಿ ಎಂಟು ಜೀವಗಳನ್ನು ಉಳಿಸಬಹುದು” ಎಂಬ ಸಂದೇಶದೊಂದಿಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಮಾರ್ಗಸೂಚಿಯಡಿ ಸಾರ್ವಜನಿಕರಲ್ಲಿ ಮೂಢನಂಬಿಕೆ ಹೋಗಲಾಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಯುವಜನತೆ, ಮಹಿಳೆಯರು ಮತ್ತು ನಾಗರಿಕ ಸಮಾಜವು ಈ ಸಾಮಾಜಿಕ ಕ್ರಾಂತಿಯಲ್ಲಿ ಕೈಜೋಡಿಸಿ, ಆರೋಗ್ಯವಂತ ಮತ್ತು ಸದೃಢ ಕರ್ನಾಟಕ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

Tags:

error: Content is protected !!