Hukkeri

ಬೆಳಗಾವಿ ಜಿಲ್ಲೆಯ ನೂತನ ಎಸ್ಪಿ ಯವರ ಖಡಕ್ ವಾರ್ನಿಂಗ ಜಾರಿಗೆ ಬರುವದೆ !

Share

ಬೆಳಗಾವಿ ಜಿಲ್ಲೆಯ ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೆ ರಾಮರಜನ್ ರವರು ಜಿಲ್ಲೆಯ ಪ್ರತಿ ಪೋಲಿಸ್ ಠಾಣೆಗಳಿಗೆ ಭೇಟಿ ನೀಡಿ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ ಠಾಣೆಗೆ ಬಂದ ಜನರ ಸಮಸ್ಯೆಗಳಿಗೆ ಸ್ಪಂದಿಸ ಬೇಕು ಹಾಗೂ ಕುಡಿದು ವಾಹನ ಚಲಾಯಿಸುವ ಮತ್ತು ನಗರ ಪ್ರದೇಶದಲ್ಲಿ ಟ್ರ್ಯಾಕ್ಟರ ಗಳಲ್ಲಿ ಕರ್ಕಶ ಹಾಗೂ ಅಸ್ಲೀಲ ಹಾಡು ಹಾಕಿ ಶಬ್ದ ಮಾಲಿನ್ಯ ಮಾಡುವ ವ್ಯಕ್ತಿಗಳಿಗೆ ಮತ್ತು ಅಪ್ರಾಪ್ತರಿಗೆ ವಾಹನ ನೀಡುವ ಪಾಲಕರ ವಿರುದ್ದ ಪ್ರಕರಣ ಧಾಖಲಿಸುವಂತೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಮತ್ತು ಪಾನ್ ಶಾಪ್ ಗಳಲ್ಲಿ ಮದ್ಯ ಮಾರಾಟ ಮಾಡುವರಿಗೆ ಅವಕಾಶ ನಿಡದಂತೆ ಕ್ರಮ ಜರುಗಿಸಲು ಆಯಾ ಪೋಲಿಸ್ ಠಾಣೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ ಮಾಡಿದ್ದರಿಂದ ಒಂದೆ ವಾರದಲ್ಲಿ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ಧಾಖಲಿಸಿದ್ದರಿಂದ ನ್ಯಾಯಾಲಯ ಮೊಟಾರು ವಾಹನ ಕಾಯ್ದೆಯಡಿ ಪಾಲಕರಿಗೆ ಶಿಕ್ಷೆ ಹಾಗೂ ದಂಡ ವಿದಿಸುತ್ತಿದೆ.

ಆದರೆ ಬೆಳಗಾವಿ ನಗರ ಪ್ರದೇಶದಲ್ಲಿ ಅಪ್ರಾಪ್ತ ಶಾಲಾ ವಿದ್ಯಾರ್ಥಿಗಳು ಮಾತ್ರ ಯಾವದೆ ಭಯವಿಲ್ಲದೆ ರಾಜಾರೋಶವಾಗಿ ದ್ವಿಚಕ್ರ ವಾಹನಗಳಲ್ಲಿ ಟ್ರೀಬಲ್ ರೈಡ್ ಮಾಡುವ ಮೂಲಕ ಟ್ರೋಲ್ ಮಾಡುತ್ತಾ ಹೋಗುವ ದೃಶ್ಯ ಕಂಡು ಬಂದಿದೆ , ಈ ದೃಶ್ಯ ಸೇರೆ ಹಿಡಿದ ಸಾರ್ವಜನಿಕರು ಬಾಲಕರ ಪಾಲಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕಾನೂನು ಎಲ್ಲರಿಗೂ ಒಂದೆ ಎನ್ನುವಾಗ ಬೆಳಗಾವಿ ನಗರ ಪ್ರದೇಶದಲ್ಲಿ ಪೋಲಿಸರಿಗೆ ಅಪ್ರಾಪ್ತರಿಗೆ ವಾಹನ ನೀಡುವ ಪಾಲಕರ ವಿರುದ್ದ ಕ್ರಮ ಜರುಗಿಸ ಬೇಕು ಎಂದು ಆಗ್ರಹವಾಗಿದೆ.

Tags:

error: Content is protected !!