ಕಳೆದ ಎರಡು ವರ್ಷದ ಹಿಂದೆ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ ನೇಹಾ ಹಿರೇಮಠ್ ಕೊಲೆಯ ಮಾಡಿರುವ ಹಂತಕ ಫಯಾಜ್ ನಿಗೆ ಹೈಕೋರ್ಟ್ ಈಗ ಮತ್ತೆ ಜಮೀನು ರದ್ದು ಮಾಡಿದ್ದು, ಕೊಲೆ ಗಡುಕನಿಗೆ ತಕ್ಕ ಶಾಸ್ತಿ ಮಾಡಿದೆ. ಆರೋಪಿ ಫಯಾಜ್ ನಿಗೆ ಗಲ್ಲು ಶಿಕ್ಷೆ ಆಗಬೇಕಂದು ನಾವು ಸತತವಾಗಿ ಸರ್ಕಾರ ಕ್ಕೆ ಬಹಳಷ್ಟು ಬಾರಿ ಹೇಳಿದ್ದೇವೆ ಆದರೆ ಸರ್ಕಾರ ಇದನ್ನು ಕಡೆಗಣಿಸುತ್ತಲೇ ಬಂದಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ನೇಹ ಹಿರೇಮಠ ಆರೋಪಿ ಜಾಮೀನು ರದ್ದು ವಿಚಾರವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬರುವ ಏಪ್ರಿಲ್ ತಿಂಗಳಿಗೆ ನೇಹಾ ಹಿರೇಮಠ್ ಕೊಲೆ ಯಾಗಿ 3 ವರ್ಷ ಕಳೆದರು ಸಹಿತ ಕೊಲೆ ಹಂತನಿಗೆ ಇನ್ನೂ ಗಲ್ಲು ಶಿಕ್ಷೆ ಆಗಿಲ್ಲ, ಬದಲಾಗಿ ಅವನಿಗೆ ಜಮೀನು ಕೊಡಿಸುವದಕ್ಕಾಗಿ ಹೋರಾಟ ನಡೆದಿದೆ ಎಂದು ಸ್ಪಷ್ಟ ವಾಗಿ ಕಾಣುತಿದೆ. ಇಲ್ಲಿ ಮುಸ್ಲಿಂ ಸಮುದಾಯ ತೃಷ್ಟಿಕರಣ ನಡೆದಿದೆ. ಕಾಂಗ್ರೆಸ್ ಸರ್ಕಾರ ಎಂದರೆ ಮುಸ್ಲಿಂ ಸರ್ಕಾರ ವಾಗಿದೆ, ಇಲ್ಲಿ ಹಿಂದುಗಳಿಗೆ ಅನ್ನ್ಯಾಯ ವಾಗುತ್ತಿದೆ ಎಂದು ಗುಡುಗಿದರು. ಜತೆಗೆ ಇನ್ನೂ ಕೊಲೆ ಮಾಡಿದ ಫಯಾಜ್ ನಿಗೆ ಜಮೀನು ಕೊಡಿಸುವ ವಕೀಲರಿಗೆ ಮತ್ತೊಮೆ ಮುಖಬಂಗವಾಗಿದೆ, ಕೊಲೆಯಾದ ನೇಹಾ ಹಿರೇಮಠ್ ಗೆ ನ್ಯಾಯ ವದಗಿಸುವ ನಿಟ್ಟಿನಲ್ಲಿ ವಕೀಲರಾದ ರಾಘವೇಂದರ ಅವರು ಕಾರ್ಯ ನಮಗೆ ಬಹಳ ಸಂತಸ ತಂದಿದೆ ಎಂದು ಹೇಳಿದರು
