Bagalkot

ಅಲೆಮಾರಿ ಜನಾಂಗದ ಸುಡುಗಾಡು ಸಿದ್ದರ ಕುಟುಂಬಗಳು ಅತಂತ್ರ..

Share

ಅವ್ರೆಲ್ಲ ಅಲೆಮಾರಿ ಜನಾಂಗದವ್ರು. ಕಳೆದ ನಾಲ್ಕೈದು ದಶಕಗಳಿಂದ ಅಲ್ಲಿ ನೂರಕ್ಕೂ ಹೆಚ್ಚು ಅಲೆಮಾರಿ ಕುಟಂಬಗಳು ವಾಸಿಸುತ್ತಿವೆ.ಆದ್ರೆ ಇವತ್ತಿಗೂ ಅವ್ರಿಗೆ ಸ್ವಂತ ಸೂರು,ಮೂಲಭೂತ ಸೌಕರ್ಯ ಒದಗಿಸಿಲ್ಲ ಸರ್ಕಾರ.ಚುನಾವಣೆ ಬಂದಾಗ ಜೋಪಡಿಗಳತ್ತ ಓಡಿ ಬರೋ ಜನಪ್ರತಿನಿದಿಗಳ ಆಸ್ವಾಸನೆಗೆ ಬೇಸತ್ತುಹೊಗಿದ್ದಾರೆ.ಅಲೆಮಾರಿ ಕುಟುಂಬಗಳಿಗೆ ಸಿಗದ ಸರ್ಕಾರಿ ಸವಲತ್ತು.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಪಟ್ಟಣದ ಹೃದಯಭಾಗದಲ್ಲಿರೋ ಜೋಪಡಿಗಳಲ್ಲಿ ವಾಸವಿರೋ ಅಲೆಮಾರಿ ಕುಟುಂಬಗಳು.ಮತ್ತೊಂದೆಡೆ ಅಲೆಮಾರಿ ಕುಟುಂಬಗಳಿಗೆ ಸೂರು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸದ ಸರ್ಕಾರ.ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಲೊಕಾಪೂರ ಪಟ್ಟಣದಲ್ಲಿ. ಹೌದು ಲೋಕಾಪುರ ಪಟ್ಟಣದಲ್ಲಿ ಅಲೆಮಾರಿ ಜನಾಂಗದ ಸುಡುಗಾಡು ಸಿದ್ದರ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ನಾಲ್ಕೈದು  ದಶಕಗಳಿಂದ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದು, ಇಂದಿಗೂ ಶಾಶ್ವತ ಸೂರು ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಪರದಾಟ ನಡೆಸುತ್ತಿರುವ ಸ್ಥಿತಿ ಕಂಡುಬರುತ್ತಿದೆ.
ಪಟ್ಟಣದ ಮಧ್ಯಭಾಗದಲ್ಲೇ ಸುಮಾರು 3ರಿಂದ 4 ಎಕರೆ ವಿಸ್ತೀರ್ಣದಲ್ಲಿ ಈ ಕುಟುಂಬಗಳು ವಾಸಿಸುತ್ತಿದ್ದರೂ,ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ. ಕನಿಷ್ಠ ಸ್ವಚ್ಛತೆ ವ್ಯವಸ್ಥೆಯನ್ನೂ ಸ್ಥಳೀಯ ಆಡಳಿತ ಮಾಡಿಲ್ಲವೆಂದು ನಿವಾಸಿಗಳು ಆರೋಪಿಸಿದ್ದಾರೆ…

ಇನ್ನು ದಶಕಗಳಿಂದ ಇಲ್ಲೇ ವಾಸವಿದ್ದರೂ ಕುಟುಂಬಗಳಿಗೆ ಕೇವಲ ಮತದಾನದ ಹಕ್ಕು ಮಾತ್ರ ಸೀಮಿತವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಭೇಟಿ ನೀಡಿ ಭರವಸೆ ನೀಡುತ್ತಾರೆ, ಆದರೆ ನಂತರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದ್ದು, ಉಳಿದ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.ನಾವು ವಾಸಿಸುವ ಜಾಗವನ್ನೇ ನಮಗೆ ನೀಡಿ. ಅಳತೆ ಕಾರ್ಯ ನಡೆಸಿ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ…

ಒಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣ ಗಮನಹರಿಸಿ ಲೊಕಾಪೂರ ಪಟ್ಟಣದ ಹೃದಯಭಾಗದಲ್ಲಿ  ವಾಸವಿರುವ ಅಲೆಮಾರಿ ಕುಟುಂಬಗಳ ಸ್ಥಳದಲ್ಲಿಯೇ  ಹಕ್ಕುಪತ್ರ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಲಿ.ನಮ್ಮನ್ನ ಬೇರೆಡೆ ಸ್ಥಳಾಂತರಿಸುವುದು ಬೇಡಾ ಅನ್ನೋದು ಅಲೆಮಾರಿ ಕುಟುಂಬಗಳ ಆಗ್ರಹ.

Tags:

error: Content is protected !!