Khanapur

ಹಲಕರ್ಣಿ ರಸ್ತೆಯ ಮಾವಿನ ಮರಗಳಿಗೆ ಗೆದ್ದಿಲು ಹಾವಳಿ!!!

Share

ಬೆಳಗಾವಿ-ಖಾನಾಪುರ ಮುಖ್ಯ ರಸ್ತೆಯ ಹಲಕರ್ಣಿ ಗ್ರಾಮದ ವ್ಯಾಪ್ತಿಯಲ್ಲಿ ಸವಾರರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ರಸ್ತೆ ಬದಿಯ ಮಾವಿನ ಮರಗಳು ಗೆದ್ದಿಲು ಹಿಡಿದು ಬೀಳುವ ಹಂತ ತಲುಪಿದ್ದು, ಅರಣ್ಯ ಇಲಾಖೆಯ ಎಸಿಎಫ್ ಸುನೀತಾ ನಿಂಬರಗಿ ಅವರು ಈ ಕೂಡಲೇ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಬೆಳಗಾವಿ ಮತ್ತು ಖಾನಾಪುರ ನಡುವಿನ ಮುಖ್ಯ ರಸ್ತೆಯು ಪ್ರತಿದಿನ ಸಾವಿರಾರು ಪ್ರವಾಸಿಗರು ಹಾಗೂ ವಾಹನ ಸಂಚಾರದಿಂದ ಕೂಡಿರುತ್ತದೆ. ಆದರೆ, ಹಲಕರ್ಣಿ ಗ್ರಾಮದ ವ್ಯಾಪ್ತಿಯಲ್ಲಿರುವ ಬೃಹತ್ ಮಾವಿನ ಮರಗಳು ಈಗ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ಮರಗಳಿಗೆ ಸಂಪೂರ್ಣವಾಗಿ ಗೆದ್ದಿಲು ಹತ್ತಿದ್ದು, ಒಳಗಿನಿಂದ ಟೊಳ್ಳಾಗಿವೆ. ಯಾವುದೇ ಕ್ಷಣದಲ್ಲಿ ಈ ಮರಗಳು ರಸ್ತೆಗೆ ಉರುಳಿ ಬೀಳುವ ಸ್ಥಿತಿಯಲ್ಲಿದ್ದು, ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮುನ್ಸೂಚನೆ ನೀಡುತ್ತಿವೆ. ನಿತ್ಯ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

ಈ ಗಂಭೀರ ಸಮಸ್ಯೆಯ ಕುರಿತು ಗಡಿನಾಡು ಹಿತರಕ್ಷಣಾ ವೇದಿಕೆಯ ಖಾನಾಪುರ ತಾಲೂಕಾ ಅಧ್ಯಕ್ಷ ಹಾಗೂ ಸಮಾಜ ಸೇವಕ ರಾಜು ಖಾತೇದಾರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು, ವಿಶೇಷವಾಗಿ ಎಸಿಎಫ್ ಸುನೀತಾ ನಿಂಬರಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ಅನಾಹುತ ನಡೆಯುವ ಮೊದಲೇ ಈ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜನಸಾಮಾನ್ಯರ ಪ್ರಾಣ ರಕ್ಷಣೆಗೆ ಇಲಾಖೆಯು ಆದ್ಯತೆ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

Tags:

error: Content is protected !!