BELAGAVI

ಬೆಳಗಾವಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಶಕ್ತಿ ಪ್ರದರ್ಶನ: ಕಾಯಕ ಯೋಗಿಗಳಿಂದ ಬೃಹತ್ ಜಾಗೃತಿ ಸಮಾವೇಶ

Share

ಬೆಳಗಾವಿಯ ಬೀದಿಗಳಲ್ಲಿ ಇಂದು ಸಂಘಟನೆಯ ಸಂಭ್ರಮ ಮನೆಮಾಡಿತ್ತು. ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಅಂಗವಾಗಿ ಬೃಹತ್ ಮೆರವಣಿಗೆ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಮತ್ತು ಸಮಾವೇಶದ ಹಿನ್ನೆಲೆ ನಗರದ ಮಾರುಕಟ್ಟೆ ಪ್ರದೇಶದಿಂದ ಆರಂಭವಾದ ಮೆರವಣಿಗೆಯಲ್ಲಿ ವೀರಗಾಸೆಯ ತಂಡ ಸೇರಿದಂತೆ ವಿವಿಧ ಕಲಾಪಥಕಗಳು ಇದರಲ್ಲಿ ಭಾಗಿಯಾಗಿ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು. ರ್ಯಾಲಿಯೂ ರಾಣಿ ಚೆನ್ನಮ್ಮ ವೃತ್ತದ್ದ ಮಾರ್ಗವಾಗಿ ವಿವಿಧಧೆಡೆಗಳಲ್ಲಿ ಸಂಚರಿಸಿ ನಗರದ ಕುಮಾರಗಂಧರ್ವ ಕಲಾಮಂದಿರಕ್ಕೆ ತಲುಪಿ ಸಭೆಯಾಗಿ ಪರಿವರ್ತಿತಗೊಂಡಿತು.

ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಮತ್ತು ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಸಿ.ಇ.ರಂಗಸ್ವಾಮಿ ಅವರು ಇದು ಬೀದಿ ಬದಿ ವ್ಯಾಪಾರಿಗಳ ಭವಿಷ್ಯ ಮತ್ತು ಸುರಕ್ಷತೆಯ ಸೃಷ್ಟಿಯ ಕಾರ್ಯಕ್ರಮವಾಗಿದೆ. ಬೀದಿ ಬದಿ ವ್ಯಾಪಾರಿಗಳನ್ನು ಕಡೆಯಾಗಿ ಕಾಣಲಾಗುತ್ತಿತ್ತು. ಆದರೇ ಇಂದು ಈ ಹಂತಕ್ಕೆ ತಲುಪಲು ಬೀದಿ ವ್ಯಾಪಾರಿಗಳ ಹೋರಾಟವೇ ಕಾರಣ ಎಂದರು.

ಅನಂತಕುಮಾರ್ ಬ್ಯಾಕೋಡ್ ಅವರು ಮಾತನಾಡಿ, ಕರ್ನಾಟಕದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ವಿಶೇಷ ಕಾನೂನನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 10 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಶರಣರ ವಚನದಂತೆ ಯಾರ ಮೇಲೂ ಅನ್ಯಾಯ ಮಾಡದೇ ಕಾಯಕ ಧರ್ಮವನ್ನು ಪಾಲಿಸುತ್ತ ಬೀದಿ ವ್ಯಾಪಾರಿಗಳು ತಮ್ಮ ಜೀವನವನ್ನು ಸಾಗಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕಾವ್ಯಶ್ರೀ, ಪವಾಡೆಪ್ಪ ಚಲವಾದಿ, ಜಾಫರ್ ಮುಲ್ಲಾ, ಉದಯಕುಮಾರ್, ಕಾರ್ತಿಕ, ದಾವಲ್’ಸಾಬ್, ಆಂಜನೇಯ ಕಾಗೆ, ಮುತ್ತೆಪ್ಪ ಮುಂದಿನಮನಿ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!