hubbali

ಹುಬ್ಬಳ್ಳಿಯ ಸಬ್ ಜೈಲ್ ನ ಖೈದಿಗಳಿಗೆ ರಾಜ್ಯಾತಿಥ್ಯ…! ಜೈಲಿನಲ್ಲಿ ಜೋರಾಗಿದೆ ಗಾಂಜಾ ಘಾಟು,ವಿಡಿಯೋ ವೈರಲ್..

Share

ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲಿ ಖೈದಿಗಳಿಗೆ ರಾಜಾತಿಥ್ಯ ನಡಲಾಗುತ್ತಿದ್ದೇಯಾ..?. ಇಂತಹದೊಂದು ಪ್ರಶ್ನೆಗೆ ಈಗ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಗಾಂಜಾ ರಾಜಾರೋಷವಾಗಿ ಜೈಲಿಗೆ ಸಪ್ಲೈ ಆಗುತ್ತಿದ್ದು, ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ ಅವರು ಹುಬ್ಬಳ್ಳಿ ಧಾರವಾಡ ಸಬ್‌ ಜೈಲ್‌ಗಳಿಗೆ ಭೇಟಿ ನೀಡಿ ಒಂದು ವಾರ ಕೂಡ ಆಗಿಲ್ಲ, ಆದ್ರೆ ಜೈಲಿನಲ್ಲಿ ಗಾಂಜಾ ಹಾವಳಿ ಮತ್ತೆ ಆರಂಭವಾದ ವಿಡಿಯೋ ವೈರಲ್ ಆಗಿದೆ.

ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ರಾಜಾರೋಷವಾಗಿ ಅಕ್ರಮ ಗಾಂಜಾ ಸಪ್ಲೈ ಆಗುತ್ತಿದೆ. ಸಬ್ ಜೈಲ್ ಹಾಗೂ ಸೆಂಟ್ರಲ್ ಜೈಲ್‌ನಲ್ಲಿರೋ ಖೈದಿಗಳ ಕೈಗೆ ಗಾಂಜಾ ಸೇರುತ್ತಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ ಅವರು ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಹುಬ್ಬಳ್ಳಿಯ ಉಪ ಕಾರಾಗೃಹ ಹಾಗೂ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತಿರೋದಾಗಿ ಹೇಳಿಕೆ ನೀಡಿದ್ದರು. ಆದರೆ ಭೇಟಿ ನೀಡಿ ಮೂರು ದಿನಗಳಲ್ಲೇ ಸಬ್ ಜೈಲ್‌ನಲ್ಲಿ ಗಾಂಜಾ ಸಪ್ಲೈ ಆಗುತ್ತಿದೆ. ಒಳಗೆ ಇರೊ ಪೋಟೋಸ್ ಮತ್ತು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tags:

error: Content is protected !!