ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಶ್ರೀಶೈಲ ಮಲ್ಲಯನ ದರ್ಶನಕ್ಕೆ ಪಾದಯಾತ್ರೆ ಪ್ರಾರಂಭಿಸಿದ ಖ್ಯಾತಿಯ ವಿಜಯಪುರ ನಗರದ ಜೋರಾಪುರ ಪೇಠ ಮಲ್ಲಯ್ಯನ ಓಣಿಯ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯದ್ದು, ಅಂದು 25 ಜನರಿಂದ ಪ್ರಾರಂಭವಾಗಿದ್ದ ಪಾದಯಾತ್ರೆ ಇಂದು 500 ಕ್ಕೂ ಅಧಿಕ ಭಕ್ತರು ಮಾರ್ಚ 3 ರಿಂದ ಮಾ.17 ರ ವರೆಗೆ ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸಲಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಮಿತಿಯ ಮುಖಂಡ ರವೀಂದ್ರ ಸಿದ್ದಯ್ಯ ಕರ್ಪೂರಮಠ, 33ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಹೋಳಿ ಹುಣ್ಣಿಮೆಯ ದಿನದಿಂದ ಯುಗಾದಿಯವರೆಗೆ ೧೫ ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ದಿ.03-03-2026 ರಂದು ಮಂಗಳವಾರ ರಾತ್ರಿ 10 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವಾಲಯದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು, ಹಿಟ್ನಳ್ಳಿಯಲ್ಲಿ ವಾಸ್ತವ್ಯ ನಡೆಯಲಿದೆ.
ಮಾ.4 ಬುಧವಾರ ರಂದು ಬಸವನ ಬಾಗೇವಾಡಿಯಲ್ಲಿ, ಮಾ.5 ರಂದು ಕೊಣ್ಣೂರ ಕ್ರಾಸ್, ಮಾ.6 ರಂದು ಹುಣಸಗಿ, ಮಾ.7 ರಂದು ದೇವಾಪೂರ ಕ್ರಾಸ್ ಸೂಗೂರ, ಮಾ.8 ರಂದು ದೇವದುರ್ಗ ತಾಲೂಕಿನ ಮಸರಕಲ್ಲ, ಮಾ.9 ರಂದು ಕಲಮಲಾ, ಮಾ.10 ರಂದು ಭಾವಿದೊಡ್ಡಿ, ಮಾ.11 ರಂದು ಆಯಿಜ, ಮಾ.12 ರಂದು ಆಲಂಪೂರ ಕ್ರಾಸ್, ಮಾ. 13 ರಂದು ನಂದಿಕೊಟಕೂರ, ಮಾ.14 ರಂದು ಪಾಲಂಪಾಲ, ಮಾ.15 ರಂದು ಆತ್ಮಕೂರ ಹಾಗೂ ಮಾರ್ಚ 16-17 ರಂದು ಈ ಪಾದಯಾತ್ರೆ ಸಮಿತಿ ಪದಾಧಿಕಾರಿಗಳು ಮತ್ತು ಭಕ್ತರು ಶ್ರೀಶೈಲದಲ್ಲಿಯೇ ಇರಲಿದ್ದಾರೆ.
ಆಸಕ್ತ ಭಕ್ತರು ತಮ್ಮ ಹೆಸರುಗಳನ್ನು ರವೀಂದ್ರ ಸಿದ್ದಯ್ಯ ಕರ್ಪೂರಮಠ- 8884447791 ಶರಣಬಸಪ್ಪಾ ಚ. ಚನ್ನಿಗಾವಿಶೆಟ್ರು- 8618406986, ಶರಣಯ್ಯ ಮಠಪತಿ- 8073342193, ಧರೆಪ್ಪ ಶ್ಯಾಪೇಟಿ- 8310879947 ಇವರ ಬಳಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ರವೀಂದ್ರ ಸಿದ್ದಯ್ಯ ಕರ್ಪೂರಮಠ ತಿಳಿಸಿದ್ದಾರೆ.
