hubbali

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಅಂಗಡಿ

Share

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಯೊಂದಕ್ಕೆ ಬೆಂಕಿ ತಗಲಿದ ಪರಿಣಾಮ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.


ಇಲ್ಲಿನ ನೆಹರೂ ಮೈದಾನದ ಬಳಿ ಇರುವ ಗೋಡೌನ್ ನಲ್ಲಿ ಆಕಸ್ಮಿಕ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಬೆಂಕಿಯ ಹೊಗೆ ಪ್ರಮಾಣ ದಟ್ಟವಾಗಿ ಆವರಿಸುತ್ತಿದ್ದಂತೆ ಅಕ್ಕಪಕ್ಕದ ಹೊಟೇಲ್, ಅಂಗಡಿ ಮುಂಗಟ್ಟುನಲ್ಲಿದ್ದ ಜನತೆ ಹಾಗೂ ಸಾರ್ವಜನಿಕರು ಭೀತಿಗೊಳ್ಳುವಂತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು.‌
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನೆ ಕುರಿತು ನಿಖರ ಮಾಹಿತಿಯನ್ನು ಪೊಲೀಸರು ಕಲೆ ಹಾಕಲಿದ್ದಾರೆ.

Tags:

error: Content is protected !!