Dharwad

ಧಾರವಾಡದಲ್ಲಿ ಸಚಿವ ಲಾಡ್ vs ಪರಿಷತ್ ಸದಸ್ಯ ಫೈಟ್…… ಪರಿಷತ್ ಸದಸ್ಯ ಜಕ್ಕಪ್ಪನವರ ಉಸ್ತುವಾರಿ ಸಚಿವ ಲಾಡ್ ಮಧ್ಯೆ ಸಭೆಯಲ್ಲೇ ಜಟಾಪಟಿ.

Share

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಫ್.ಜಕ್ಕಪ್ಪನವರ ಮಧ್ಯೆ ಕೆಡಿಪಿ ಸಭೆಯಲ್ಲೇ ಜಟಾಪಟಿ ನಡೆದಿದೆ.

ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆದಿತ್ತು. ಈ ವೇಳೆ ಜಕ್ಕಪ್ಪನವರ ಅವರು, ಧಾರವಾಡ ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ ಜನಾಂಗವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಈ ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ಎಸ್‌ಸಿ, ಎಸ್‌ಟಿ ಸಮಾಜದ ಪರ ಧ್ವನಿ ಎತ್ತುತ್ತಿದ್ದೇನೆ ಎಂದರು. ಈ ವೇಳೆ ಸಚಿವ ಲಾಡ್ ಅವರು, ಸಭೆಯಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಕೊಡಲಾಗುತ್ತಿದೆ. ಇಲ್ಲಿ ವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಈ ವೇಳೆ ಎದ್ದು ನಿಂತ ಜಕ್ಕಪ್ಪನವರ ನಾನು ಸಭೆಯಿಂದ ಹೊರ ಹೋಗುತ್ತೇನೆ ಎಂದರು. ನಾನು ಸಭೆಯಿಂದ ಹೊರ ಹೋಗಲು ನಿಮಗೆ ಹೇಳಿಲ್ಲ. ನೀವು ಹೋಗುವುದಾದರೆ ಹೋಗಬಹುದು ಎಂದು ಸಚಿವರು ಹೇಳಿದ್ದರಿಂದ ಇಬ್ಬರ ನಡುವೆ ಜಟಾಪಟಿ ಜೋರಾಗಿಯೇ ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಕುರಿತು ಚರ್ಚೆ ಮಾಡುವಾಗ ಈ ಜಟಾಪಟಿ ನಡೆದಿದೆ. ಇಬ್ಬರ ನಡುವೆ ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕರಾದ ಎಂ.ಆರ್.ಪಾಟೀಲ ಹಾಗೂ ಪ್ರದೀಪ್ ಶೆಟ್ಟರ್ ಅವರು ಪರಿಸ್ಥಿತಿ ತಿಳಿಗೊಳಿಸಿ ಇಬ್ಬರನ್ನೂ ಶಾಂತಗೊಳಿಸಿ ಸಮಾಜ ಕಲ್ಯಾಣ ಇಲಾಖೆ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಟ್ಟರು.

Tags:

error: Content is protected !!