Dharwad

ಕಳೆದ 11 ವರ್ಷದಲ್ಲಿ ಕೇಂದ್ರ ಸರ್ಕಾರ ಎಷ್ಟು ಉದ್ಯೋಗ ಕೊಟ್ಟಿದೆ?: ಲಾಡ್ ಪ್ರಶ್ನೆ.

Share

ನಾಳೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಜೆಪಿ ಸಹ ಇವರ ಹೋರಾಟಕ್ಕೆ ಕೈ ಜೋಡಿಸಿದ್ದು, ಈ ಸಂಬಂಧ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಅವರು, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಮೋದಿ ಅವರು‌ ವರ್ಷಕ್ಕೆ 2 ಕೋಟಿ‌ ಉದ್ಯೋಗ‌ ಕೊಡುತ್ತೇವೆ ಎಂದಿದ್ದರು. ಈಗಲೂ ಕೇಂದ್ರದಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಅವರು ಎಷ್ಟು ಉದ್ಯೋಗ ನೀಡಿದ್ದಾರೆ ಎಂಬುದನ್ನು ಹೇಳಲಿ. ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮೇಲೆ 45 ಸಾವಿರ ಉದ್ಯೋಗ ಭರ್ತಿ ಮಾಡಿದ್ದೇವೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಎಷ್ಟು ಭರ್ತಿ ಮಾಡಿದ್ದಾರೆ? ಸಿಎಂ ಅವರು ಇನ್ನು 65 ಸಾವಿರ ಉದ್ಯೋಗ ಭರ್ತಿ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು. ಜತೆಗೆ
ಉದ್ಯೋಗಾಕಾಂಕ್ಷಿಗಳು ನನ್ನನ್ನು ಭೇಟಿ ಮಾಡಿದ್ದಾರೆ, ಅವರಿಗೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇದೆ. ಬಜೆಟ್ ನಂತರ ಅಥವಾ ಮೊದಲೇ ಸಿಎಂ ಅವರು ಸಂದಾನ ಮಾಡಿ ಮಾತು‌ ನೀಡಿದ್ದಾರೆ
ಸರ್ಕಾರ ಉದ್ಯೋಗ ಕರೆಯಲಿದೆ ಎಂಬ ಭರವಸೆ ಇದೆ. ಹೈಕೋರ್ಟ್ ಕೂಡ ಯುವಕರಿಗೆ ಸಮಯ ಕೊಡಬೇಕು ಎಂದು ಹೇಳಿದೆ. ಅವರಿಗೆ ಪ್ರತಿಭಟನೆ ಮಾಡಬೇಡಿ ಎಂದು ನಾನು‌ ಹೇಳಲ್ಲ, ಆದರೆ ನಾವು ಬಹಳ ಹತ್ತಿರದಲ್ಲೇ‌ ಉದ್ಯೋಗ ಕರೆಯುವವರಿದ್ದೇವೆ. ಬಿಜೆಪಿಯವರು ಯಾಕೆ ಪ್ರತಿಭಟನೆ ಮಾಡುತ್ತಾರೆ ಅಂತಾನೇ ಗೊತ್ತಿಲ್ಲ, ಅವರು ಈಗ ಮೋದಿ‌ ವಿರುದ್ಧವೇ ಪ್ರತಿಭಟನೆ ಮಾಡಬೇಕು. ನಮ್ಮ ವಿರುದ್ಧ ಪ್ರತಿಭಟನೆ ಮಾಡಿ ಏನು ಉಪಯೋಗ ಇಲ್ಲ. ಕೇಂದ್ರದ ವಿರುದ್ಧ ಬಿಜೆಪಿಯವರು ಮೊದಲು ಪ್ರತಿಭಟನೆ ಮಾಡಲಿ ಎಂದು ತಿಳಿಸಿದರು.

 

Tags:

error: Content is protected !!