hubbali

ನಮ್ಮ ಅವಧಿಯಲ್ಲಿಯೇ ಬೆಣ್ಣೆ ಹಳ್ಳ ಪ್ರಾಜೆಕ್ಟ್ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತೇವೆ – ಸಚಿವ ಸಂತೋಷ್ ಲಾಡ್

Share

ಧಾರವಾಡ ಜಿಲ್ಲೆಯ ನವಲಗುಂದದ ಬೆಣ್ಣೆ ಹಳ್ಳ ಪ್ರಾಜೆಕ್ಟ್‌ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 200ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಮುಖ್ಯಂಮತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನತೆ ಸೇರಿ ರೈತರ ಪರವಾಗಿ ನಾನು ಧನ್ಯವಾದ ಸಲ್ಲಿಸುತ್ತೇವೆ. ನಮ್ಮ ಅವಧಿಯಲ್ಲಿಯೇ ಬೆಣ್ಣೆ ಹಳ್ಳ ಪ್ರಾಜೆಕ್ಟ್ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.

ನಗರದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಣ್ಣೆ ಹಳ್ಳ ತುಪ್ಪರಿ ಹಳ್ಳ ಅಭಿವೃದ್ಧಿಗಾಗಿ‌ ನವಲಗುಂದ ಶಾಸಕರಾದ ಎನ್ ಹೆಚ್ ಕೊನರೆಡ್ಡಿಯವರು ತುಂಬಾ ಪ್ರಯತ್ನಿಸಿದ್ದಾರೆ. ಕೊನರೆಡ್ಡಿಯವರ ವಿಶೇಷ ಪ್ರಯತ್ನವಾಗಿ ಇಂದು ಬೆಣ್ಣೆ ಹಳ್ಳ ಪ್ರಾಜೆಕ್ಟ್ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಹಾಗಾಗಿ ಕೊನರೆಡ್ಡಿಯವರಿಗೂ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬೆಣ್ಣೆ ಹಳ್ಳ ತುಪ್ಪರಿ ಹಳ್ಳದ ಒ್ರಹಾದಿಂದ ನವಲಗುಂದ ಭಾಗ ಸೇರಿ ಜಿಲ್ಲೆಯ ಹಳ್ಳ ಹರಿದು ಬರುವ ಪ್ರದೇಶದ ಅಕ್ಕಪಕ್ಕದ ಜಮೀನ ರೈತರು ತುಂಬಾ ನಷ್ಟು ಅನುಭವಿಸಿದ್ದಾರೆ. ಹಳ್ಳಗಳ ಪ್ರವಾಹದಿಂದ ಸಾಕಷ್ಟು ರೈತರು ತುಂಬಾ ನಷ್ಟ ಜತೆಗೆ ಪ್ರಾಣ ಹಾನಿಗಳ ನಡೆದು ಹೋಗಿವೆ. ಇದಕ್ಕೆ ಒಂದು ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೊನರೆಡ್ಡಿಯವರು ಪ್ರಯತ್ನ ತುಂಬಾ ಇದೆ. ಮಿದಲನೇ ಹಂತದಲ್ಲಿ ನಮ್ಮಗೆ ಮೂರು ತಿಂಗಳ ಕಾಲ ಇದೆ, ಎರಡ್ಮೂರು ಹಂತದಲ್ಲಿ ಈ ಪ್ರಾಜೆಕ್ಟ್ ಪೂರ್ಣಗೊಳಿಸಲಾಗುವುದು. ರೈತರಿಗೆ ಅನುಕೂಲ ಆಗುವ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಜತೆಗೆ ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ರೀತಿ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ‌ ಪ್ರತಿಕ್ರಿಯಿಸಿದ ಅವರು, ನಾವು ಪ್ರೋಟೋಕಾಲ್ ಪ್ರಕಾರವೇ ಕಾರ್ಯಕ್ರಮ‌ ಮಾಡುತ್ತಿದ್ದೇವೆ. ಬಿಜೆಪಿಗರ ಈ ರೀತಿಯ ಆರೋಪ ಸರಿಯಲ್ಲ, ಹಾಗೇನಾದರೂ ಅವರಿಗೆ ಸರ್ಕಾರಿ ಕಾರ್ಯಕ್ರಮ ನಮ್ಮ ಪಕ್ಷದ ಕಾರ್ಯಕ್ರಮ ಅಂತಾ ಅವರಿಗೆ ಅನಿಸಿದ್ದಲ್ಲಿ ನಮ್ಮೊಂದಿಗೆ ನೇರವಾಗಿ ಮಾತನಾಡಲಿ ಎಂದು ಕುಟುಕಿದರು. ಇನ್ನೂ ಡಿಪಿಆರ್‌ನಂತೆಯೇ ಕಾಮಗಾರಿ ನಡೆಸಬೇಕೆಂಬ ಮಾಜಿ ಸಚಿವ ಶಂಕರ ಪಾಟೀಲ್ ಮುನ್ನೇನಕೊಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಹಿಂದೆ ಅವರ ಸರ್ಕಾರ ಇದ್ದಾಗಲೇ ಡಿಪಿಆರ್ ಆಗಿತ್ತು. ಆಗ ಇವರೇ ಒಂದು ಅಡಿ ಮಣ್ಣು ಹಳ್ಳದಿಂದ ತೆಗೆಯಲಿಲ್ಲ. ಈಗ ನಾವು 200ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಶಂಕರ ಪಾಟೀಲರಿಗೆ ವಿಶೇಷ ಕಾಳಜಿ ಇದರೆ ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ, ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಲಿ. ಈ‌ ಕ್ಷೇತ್ರದ‌ ಎಂ ಪಿ‌ಯವರು ಈಗ‌ ಕೇಂದ್ರದ ಪ್ರಭಾವಿ ಮಂತ್ರಿಯಾಗಿದ್ದಾರೆ ವಿಶೇಷ ಅನುದಾನ ತಂದು ಮಾಡಲಿ ಬೇಡ ಅಂದವರು ಯಾರು ಎನ್ನುವ ಮೂಲಕ ಟಾಂಗ್ ನೀಡಿದರು

Tags:

error: Content is protected !!