BELAGAVI

ಬೆಳಗಾವಿಯ ಕೆಎಲ್‌ಎಸ್ ಶಾಲೆಗೆ ಕೀರ್ತಿ ತಂದ ಸಮೀರ್ ಪರ್ವತೀಕರ್: ಪ್ರತಿಷ್ಠಿತ ‘ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ’ಕ್ಕೆ ಆಯ್ಕೆ!

Share

ಬೆಳಗಾವಿಯ ಕೆಎಲ್‌ಎಸ್ ಶಾಲೆಯ ಸ್ಕೌಟ್ ವಿದ್ಯಾರ್ಥಿ ಸಮೀರ್ ಪರ್ವತೀಕರ್ ದೇಶದ ಅತ್ಯುನ್ನತ ಸ್ಕೌಟ್ ಗೌರವವಾದ ‘ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ’ಕ್ಕೆ ಭಾಜನರಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ

ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಯುವಜನತೆಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. 2016-17ನೇ ಸಾಲಿನ ಬ್ಯಾಚ್‌ನ ವಿದ್ಯಾರ್ಥಿಯಾದ ಸಮೀರ್ ಪರ್ವತೀಕರ್ ಅವರ ನಿರಂತರ ಪರಿಶ್ರಮಕ್ಕೆ ಈಗ ಭಾರತ ಸ್ಕೌಟ್ ಅಸೋಸಿಯೇಷನ್‌ನಿಂದ ಈ ಮಹತ್ವದ ಮನ್ನಣೆ ಸಿಕ್ಕಿದೆ. ಸಮೀರ್ ಅವರ ಈ ಸಾಧನೆಯ ಹಿಂದೆ ಸ್ಕೌಟ್ ಮಾಸ್ಟರ್ ಸುಮನ್ ಘಟ್ಟದ ಅವರ ಮಾರ್ಗದರ್ಶನವಿದ್ದು, ಶಾಲೆಯ ಸಾಂಗೊಳ್ಳಿ ರಾಯಣ್ಣ ಸ್ಕೌಟ್ ಟ್ರೂಪ್ ಈ ಸಾಧನೆಯಿಂದ ಸಂಭ್ರಮದಲ್ಲಿದೆ.

ಈ ಮಹತ್ಸಾಧನೆಗೆ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್. ಸಿಂಧ್ಯಾ, ರಾಜ್ಯ ಉಪಾಧ್ಯಕ್ಷರಾದ ಜಿ.ಬಿ. ಮನ್ನಿಕೇರಿ, ಜಿಲ್ಲಾ ಆಯುಕ್ತರಾದ ಪ್ರಭಾವತಿ ಪಾಟೀಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕೆಎಲ್‌ಎಸ್ ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಶಿಕ್ಷಕ ವೃಂದ ಸಮೀರ್ ಅವರ ಭವಿಷ್ಯದ ಹಾದಿಗೆ ಶುಭ ಹಾರೈಸಿದ್ದಾರೆ.

Tags:

error: Content is protected !!