ದಶಕಗಳ ಕಾಲ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸಿದ ಬೆಳಗಾವಿ ಜಿಲ್ಲೆಯ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಇಂದು ವಿಶೇಷ ಗೌರವ ಸಲ್ಲಿಸಲಾಯಿತು. ಬೆಳಗಾವಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ವೇದಿಕೆಯ ವತಿಯಿಂದ 85 ವರ್ಷ ಮೇಲ್ಪಟ್ಟ ಹಿರಿಯ ಸಾಧಕರಿಗಾಗಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ಪೊಲೀಸ್ ಹೆಡ್ ಕ್ವಾರ್ಟರ್ಸ್ ಆವರಣದಲ್ಲಿರುವ ಶ್ರೀ ಸಿದ್ಧಭದ್ರೇಶ್ವರ ದೇವಾಲಯದ ಸಭಾಂಗಣದಲ್ಲಿ ಇಂದು ನಿವೃತ್ತ ಪೊಲೀಸ್ ಅಧಿಕಾರಿಗಳ ಸಮ್ಮಿಲನ ನಡೆಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ 85 ವರ್ಷ ವಯೋಮಾನ ದಾಟಿದ ಒಂಬತ್ತು ಹಿರಿಯ ನಿವೃತ್ತ ಅಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ನಿವೃತ್ತ ಐಜಿಪಿ ಎಸ್.ಎಸ್. ಪಾವಟೆ, ನಿವೃತ್ತ ಎಸ್.ಪಿ ಡಿ.ಬಿ. ನೇತ್ರೆಕರ್ ಸೇರಿದಂತೆ ಡಿ.ಎಸ್.ಪಿ, ಸಿಪಿಐ ಹಾಗೂ ಕಾನ್ಸ್ಟೇಬಲ್ ದರ್ಜೆಯ ನಿವೃತ್ತ ಅಧಿಕಾರಿಗಳನ್ನು ಗೌರವಿಸಲಾಯಿತು. ವೇದಿಕೆಯ ಅಧ್ಯಕ್ಷ ಅಶೋಕ ಎಲ್. ಸದಲಗಿ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭವನ್ನು ಉತ್ತರ ವಲಯ ಐಜಿಪಿ ಡಾ. ಚೇತನಸಿಂಗ್ ರಾಥೋಡ್ ಅವರು ಉದ್ಘಾಟಿಸಿ ಮಾತನಾಡಿ, “ಹಿರಿಯ ಅಧಿಕಾರಿಗಳ ಅನುಭವ ಮತ್ತು ಶಿಸ್ತು ಇಂದಿನ ಪೀಳಿಗೆಗೆ ಮಾದರಿ” ಎಂದು ಶ್ಲಾಘಿಸಿದರು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, 85 ವರ್ಷ ಪೂರೈಸಿದ ನಿವೃತ್ತ ಪೊಲೀಸರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಅವರ ಆರೋಗ್ಯಕರ ಜೀವನದ ಗುಟ್ಟನ್ನು ಪ್ರಶಂಸಿಸಿದರು. ಬೈಟ್
ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು, ಪೊಲೀಸ್ ಇಲಾಖೆ ಕೆಲಸ ಒತ್ತಡದಿಂದ ಕೂಡಿರುತ್ತದೆ. ಅದರಲ್ಲಿಯೂ ಮನಃಶಾಂತಿಯನ್ನು ಕಾಪಾಡಿಕೊಂಡು ಹೋಗುವುದು ಬಹುಮುಖ್ಯ. ಸಕ್ರಿಯ ಸೇವೆಯಿಂದ ನಿವೃತ್ತಿಯಾಗಲೂ ಸರ್ಕಾರ 60 ವರ್ಷ ಸಿಮೀತಗೊಳಿಸಿದೆ. ಆದರೇ, ಜೀವನದಲ್ಲಿ 100 ಕ್ಕೂ ಹೆಚ್ಚು ವರ್ಷಗಳ ಕಾಲ ಸಕ್ರಿಯರಾಗಿರಬಹುದು ಎಂದರು

ಸತ್ಕಾರ ಸ್ವೀಕರಿಸಿದ ನಿವೃತ್ತ ಎಸ್.ಪಿ ಎಸ್.ಎಸ್. ಮುರಗೋಡ ನಿವೃತ್ತ ಎಸ್ಪಿ ಅಶೋಕ್ ಸದಲಗೆ ಸೇರಿದಂತೆ ಇನ್ನುಳಿದ ನಿವೃತ್ತ ಅಧಿಕಾರಿಗಳು ತಮ್ಮ ಸೇವೆಯನ್ನು ಪರಿಗಣಿಸಿ ಸತ್ಕರಿಸಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಇಲಾಖೆಯಲ್ಲಿ ಸಲ್ಲಿಸಿದ ಸೇವೆ ಮತ್ತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಬೈಟ್
ವೇದಿಕೆಯ ಕಾರ್ಯದರ್ಶಿ ಟಿ.ಎಚ್. ಕರೀಕಲ್ ಹಾಗೂ ಉಪಾಧ್ಯಕ್ಷರು, ಕಾರ್ಯಕಾರಿ ಮಂಡಳಿ ಸದಸ್ಯರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ತಮ್ಮ ಹಳೆಯ ಸಹೋದ್ಯೋಗಿಗಳನ್ನು ಭೇಟಿಯಾದ ನಿವೃತ್ತ ಅಧಿಕಾರಿಗಳಲ್ಲಿ ಹಳೆಯ ನೆನಪುಗಳು ಮರುಕಳಿಸಿದವು.
