hubbali

ನಕಲಿ ಪಿಎಚ್’ಡಿ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮ ಆಗ್ರಹಿಸಿ ಪ್ರತಿಭಟನೆ

Share

ರಾಜ್ಯದಲ್ಲಿ ನಕಲಿ ಪಿಎಚ್’ಡಿ ಅಭ್ಯರ್ಥಿಗಳ ವಿರುದ್ಧ
ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು.

ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ಹೊಸೂರಿನ ಕೆಎಂಸಿಆರ್ ಐ ಆಸ್ಪತ್ರೆ ಎದುರು ಬೃಹತ್‌ ಪ್ರತಿಭಟನೆ ನಡೆಸಿ ನಕಲಿ ಪಿಎಚ್’ಡಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ ಪೊಲೀಸ್‌ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಎಬಿವಿಪಿ ಕಾರ್ಯಕರ್ತರು ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಕಲಿ ಪಿಎಚ್‌’ಡಿ ಹಾವಳಿ ಹೆಚ್ಚಾಗಿದ್ದು ಸಾಕಷ್ಟು ಭ್ರಷ್ಟಾಚಾರ ಸಹ ಅಗಿದೆ, ನಕಲಿ ಪಿಎಚ್’ಡಿ ಅಭ್ಯರ್ಥಿಗಳಿಂದ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ಆಗತಾ ಇದೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪಿಯುಸಿ, ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಅನೇಕರು ನಕಲಿ ಪಿಎಚ್‌’ಡಿ ಪದವಿ ಪಡೆದಿದ್ದಾರೆ, ಅಂತಹವರಲ್ಲಿ ನಕಲಿ ಪಿಎಚ್‌’ಡಿ ಅಭ್ಯರ್ಥಿಗಳನ್ನು ಗುರುತಿಸಲು ಆಗ್ರಹಿಸಿದರು.

Tags:

error: Content is protected !!