ಮಾತೃಶಕ್ತಿಯಿಂದ ಬೆಳೆದ ನಮ್ಮ ಭಾರತ ದೇಶಕ್ಕೆ ನಾವು ಭಾರತಮಾತೆ ಎಂದು ಗೌರವಿಸುತ್ತೇವೆ. ಅಂತಹ ನಮ್ಮ ಭಾರತೀಯ ಸಂಸ್ಕೃತಿಯನ್ನು, ಉಳಿಸಿ ಬೆಳೆಸಿ ದೇಶದ ಗೌರವವನ್ನು ಕಾಪಾಡಿಕೊಂಡು ಹೋಗುವುದು ಮತ್ತು ರಾಷ್ಟ್ರವನ್ನು ರಕ್ಷಿಸವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದು ಆತ್ಮನಿರ್ಭರ ಭಾರತ ಜಿಲ್ಲಾ ವಕ್ತಾರ ನಂದು ಗಾಯಕವಾಡ ಹೇಳಿದರು.


ಅವರು ಭಾನುವಾರರಂದು ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಿದ್ದ ಚಿಕ್ಕೋಡಿ ಗ್ರಾಮಾಂತರ ವ್ಯಾಪ್ತಿಯ ವಿರಾಟ ಹಿಂದೂ ಸಮ್ಮೇಳನವನ್ನು ಉದ್ದೆಶಿಸಿ ವಕ್ತಾರರಾಗಿ ಮಾತನಾಡಿದರು.
ನೇತೃತ್ವನ್ನುವಹಿಸಿಕೊಂಡಿದ್ದ ಪ್ರಾಸ್ತಾವಿಕವಾಗಿ ಮಾತನಾಡಿದ ನಿಪ್ಪಾಣಿ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಭಾರತೀಯ ಸಂಸ್ಕ್ರತಿಯು ವಿಶ್ವಕ್ಕೆ ಮಾದರಿಯಾಗಿದ್ದು ಈ ಸಂಸ್ಕ್ಋತಿಯ ರಕ್ಷಣೆ ನಮ್ಮ ತಾಯಂದಿರಿಂದ ಆಗುತ್ತಿದೆ. ನಮ್ಮ ಆರ್ ಎಸ್ ಎಸ್ ಸಂಘವು ಕಟ್ಟಿ ಬೆಳೆಸಿದ ಭಾರತವನ್ನು ಒಳಗಿನಿಂದ ಮತ್ತು ಹೊರಗಿನಿಂದ ರಕ್ಷಿಸುವ ಕಾರ್ಯವಾಗಬೇಕಾಗಿದೆ. ಸಂಘದ ಶತಮಾನೋತ್ಸವ ಅಂಗವಾಗಿ ಐದು ವಿಷಯಗಳಾದ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಭೋದನೆ, ಸ್ವದೇಶಿ ಜೀವನಶೈಲಿ, ನಾಗರೀಕ ಶಿಷ್ಟಾಚಾರ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ವಕ್ತರರಾಗಿ ಆಗಮೀಸಿದ್ದ ವಿಶ್ವ ಹಿಂದೂ ಪರಿಷತ್ ಗೋಕಾಕ ಪ್ರಾಂತ ಸತ್ಸಂಗ ಪ್ರಮುಖರಾದ ನಾರಾಯಣ ಮಠಾಧಿಕಾರಿ ,
ಚಿಕ್ಕೋಡಿಯ ಸಾಮಾಜಿಕ ಕಾರ್ಯಕರ್ತೆ ನೀಲಮ ಸಂಜಯ ಅಡಕೆ ಮಾತನಾಡಿದರು.
ಸಮಮೇಳನದ ದಿವ್ಯಸಾನಿಧ್ಯವನ್ನು ವಹಿಸಿಕೊಂಡು ಮಂಗಸೂಳಿ ಗಿರಿ ಆಶ್ರಮದ ಶ್ರೀ ರಾಜಯೋಗಿ ನಾಗಲಿಂಗ ಮಹಾಸ್ವಾಮೀಜಿ, ಹುಕ್ಕೇರಿ ಕ್ಯಾರಗುಡ್ಡಮಠದ ಶ್ರೀ ಅಭಿನವ ಮಂಜುನಾಥ ಮಹಾರಾಜರು, ನಿಪ್ಪಾಣಿ ಸಮಾಧಿಮಠದ ಶ್ರೀ ಪ್ರಾಣಲಿಂಗ ಮಹಾಸ್ವಾಮೀಜಿ ಮಾತನಾಡಿದರು.
ಸಮ್ಮೇಳನದ ಅಂಗವಾಗಿ ಅನೇಕ ವಾದ್ಯಮೇಳ, ಮಹಿಳೆಯರ ಕುಂಭಮೇಳದೊಂದಿಗೆ ಶೋಭಾಯಾತ್ರೆ ಜರುಗೀತು. ಶೋಭಾಯಾತ್ರೆಯು ಚನ್ನಮ್ಮಾ ವೃತ್ತದ ಬಳಿವಿರುವ ಶಿವ ಶಂಕರ ಜೊಲ್ಲೆ ಪ್ರೌಢಶಾಲೆಯ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಬೀರೇಶ್ವರ ಆವರಣದವರೆಗೆ ನಡೆಯಿತು ನಂತರ ಶ್ರಿ ಬೀರೇಶ್ವರ ಆವರಣದಲ್ಲಿ ಸಮ್ಮೇಳನ ನಡೆಯಿತು. ಪ್ರಾರಂಭದಲ್ಲಿ ಜೊಲ್ಲೆ ಶಾಲಾ ಆವರಣದಲ್ಲಿ ಶೋಭಾ ಯಾತ್ರೆಗೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ನೀಲಮ ಅಡಕೆ ಸೇರಿದಂತೆ ಅನೇಕ ಗಣ್ಯರು ಗೋಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮ್ಮೇಳನ ಸಮಾರಂಭದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ , ಶಾಸಕಿ ಶಶಿಕಲಾ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ದುಂಡಪ್ಪಾ ಬೆಂಡವಾಡೆ, ಸಂಜೀವ ಪಾಟೀಲ, ಮಹೇಶ ಬಾಕಳೆ, ಭಾಲಚಂದ್ರ ಬಾಕಳೆ, ಸುನೀಲ ಕಾಮತ, ದಿಲೀಪ ದೇಸಾಯಿ, ವಿನೋದ ಶಹಾ, ಕುಮಾರ ಕುಂಬಾರ, ಉತ್ತಮ ಕಾಟಕರ, ಶಿವರಾಜ ಜೊಲ್ಲೆ, ಪಂಚಾಕ್ಷರಿ ಮಠಪತಿ, ಪುಂಡಲೀಕ ಬುಬನಾಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥೀತರಿದ್ದರು.
