ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕಳೆದ ವರ್ಷದ ರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿದ 50 ಲಕ್ಷ ರೂ. ಅನುದಾನದಲ್ಲಿ ನಾಳೆ ಮಂಗಳವಾರ ತರಾತುರಿಯಲ್ಲಿ ರಾಜ್ಯೋತ್ಸವದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿರುವ
ಬೆಳಗಾವಿ ಜಿಲ್ಲಾಧಿಕಾರಿಗಳ ಸರ್ವಾಧಿಕಾರ ಧೋರಣೆಯ ವಿರುದ್ಧ ಬೆಳಗಾವಿ ಅನೇಕ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿವೆ.

ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಎದುರು ವಿವಿಧ ಕನ್ನಡಪರ ಸಂಘಟನೆಗಳು ತರಾತುರಿಯಲ್ಲಿ ಕನ್ನಡ ಹಬ್ಬ ಆಚರಿಸಲು ಹೊರಟ ಬೆಳಗಾವಿ ಜಿಲ್ಲಾಡಳಿತದ ನೀತಿಯನ್ನು ಖಂಡಿಸಿ ಪ್ರತಿಭಟನೆಯನ್ನು ಕೈಗೊಂಡವು.

ಬೆಳಗಾವಿಯ ಕನ್ನಡಪರ ಸಂಘಟನೆಗಳ ಆಗ್ರಹದ ಹಿನ್ನೆಲೆ ಸರ್ಕಾರ 50 ಲಕ್ಷ ರೂಪಾಯಿ ಅನುದಾನವನ್ನು ಬೆಳಗಾವಿ ಕನ್ನಡ ಹಬ್ಬಕ್ಕಾಗಿ ಬಿಡುಗಡೆ ಮಾಡಿದೆ. ಇದನ್ನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರ ಮೂಲಕ ಸಭೆ ನಡೆಸಿದ್ದಾರೆ. ಕನ್ನಡ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಡಿ ಉಸ್ತುವಾರಿ ಸಚಿವರನ್ನು ನಾಗರೀಕ ಸನ್ಮಾನ ಮಾಡಬೇಕು. ಸ್ಥಳೀಯ ಕಲಾವಿದರಿಗೆ ಅವಕಾಶವನ್ನು ನೀಡಬೇಕು. ಕನ್ನಡಕ್ಕಾಗಿ ಶ್ರಮಿಸಿದ ಐಪಿಎಸ್ , ಐಎಎಸ್ ಅಧಿಕಾರಿಗಳನ್ನು, ಹಿರಿಯ ಸಾಹಿತಿಗಳು, ಕನ್ನಡ ಹೋರಾಟಗಾರರನ್ನು ಸನ್ಮಾನ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಆದರೇ ಜಿಲ್ಲಾಧಿಕಾರಿಗಳು ತರಾತುರಿಯಲ್ಲಿ ಮಾಡುತ್ತಿರುವ ಈ ಕಾರ್ಯವನ್ನು ಖಂಡಿಸುತ್ತೇವೆ ಎಂದು ಕನ್ನಡ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಹೋರಾಟಗಾರರಾದ ಮಹಾದೇವ ತಳವಾರ, ಅಶೋಕ ಚಂದರಗಿ, ನಗರ ಸೇವಕ ರಮೇಶ ಸೊಂಟಕ್ಕಿ, ಶ್ರೀನಿವಾಸ ತಾಳುಕರ, ವಾಜಿದ ಹಿರೇಕೋಡಿ,
ಬಲರಾಮ ಮಾಸೇನಟ್ಟಿ, ಮೈನೋದ್ದಿನ ಮಕಾನದಾರ, ದೇವೇಂದ್ರ ತಳವಾರ, ಮಹೇಶ ಶೀಗಿಹಳ್ಳಿ, ಶಿವು ದೇವುರ,ಗೌಸ್ ಸನದಿ, ಸಂತೋಷ ತಳ್ಳಿಮನಿ, ನಾಗೇಶ ಕೊಪ್ಪದ, ಬಾಳೇಶ ಗುಡಗನಟ್ಟಿ ಹಾಗೂ ಪ್ರಕಾಶ ಮೂಕನವರ ಇನ್ನುಳಿದವರು ಭಾಗಿಯಾಗಿದ್ಧರು.
