Vijaypura

ಮಾಡಿಫೈಡ್ ಸೈಲೆನ್ಸರ್ ಗೆ ಬಿಸಿ ಮುಟ್ಟಿಸಿದ ಪೊಲೀಸರು

Share

ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ್ ನಿಂಬರಗಿ ಅವರ ಉಪಸ್ಥಿತಿಯಲ್ಲಿ, ದರ್ಗಾ ಜೈಲು ವೃತ್ತದ ಬಳಿ ದ್ವಿಚಕ್ರ ವಾಹನಗಳಿಂದ ವಶಪಡಿಸಿಕೊಂಡಿದ್ದ ಮಾರ್ಪಡಿಸಿದ (ಮಾಡಿಫೈಡ್) ಸೈಲೆನ್ಸರ್‌ಗಳನ್ನು ನಾಶಪಡಿಸಲಾಗಿದೆ. ಕಾನೂನುಬಾಹಿರ ಹಾಗೂ ಅತಿಯಾದ ಶಬ್ದ ಉಂಟುಮಾಡುವ ಸೈಲೆನ್ಸರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಯಿತು. ಸಾರ್ವಜನಿಕರಿಗೆ ತೊಂದರೆ ನೀಡುವ ಹಾಗೂ ಶಬ್ದ ಮಾಲಿನ್ಯ ಹೆಚ್ಚಿಸುವ ಇಂತಹ ಸೈಲೆನ್ಸರ್‌ಗಳ ಬಳಕೆಯನ್ನು ತಡೆಯಲು ಪೊಲೀಸರು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಪರಿಶೀಲನೆ ಮತ್ತು ಕಾನೂನು ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:

error: Content is protected !!