BELAGAVI

ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನಾಳೆ ‘ಮುರುಘೇಂದ್ರಗೌಡ ಪಾಟೀಲ್ ಟ್ರೋಫಿ’ ಮಹಾ ಫೈನಲ್: ಪಾಂಡುರಂಗ vs ಸಾಯಿರಾಜ್ ಸ್ಪೋರ್ಟ್ಸ್ ಫೈಟ್!

Share

ಬೆಳಗಾವಿಯ ಕ್ರೀಡಾಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿರುವ ‘ಮುರುಘೇಂದ್ರಗೌಡ ಪಾಟೀಲ್ ಕ್ರಿಕೆಟ್ ಟೂರ್ನಮೆಂಟ್’ ಈಗ ಅಂತಿಮ ಹಂತಕ್ಕೆ ತಲುಪಿದೆ. ಕಳೆದ ಹತ್ತು ದಿನಗಳಿಂದ ರೋಚಕವಾಗಿ ಸಾಗುತ್ತಿರುವ ಈ ಪಂದ್ಯಾವಳಿಯ ಅಂತಿಮ ಕಾದಾಟ ನಾಳೆ ನಡೆಯಲಿದ್ದು, ನಗರದಾದ್ಯಂತ ಭಾರೀ ಕುತೂಹಲ ಮೂಡಿಸಿದೆ.

ಯುವ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಆಯೋಜಿಸಿರುವ 2026ನೇ ಸಾಲಿನ ಆಲ್ ಇಂಡಿಯಾ ಓಪನ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯಗಳು ಅತ್ಯಂತ ರೋಚಕವಾಗಿ ಜರುಗಿದವು. ಪಾಂಡುರಂಗ ಮತ್ತು ಶೆಟ್ಟಿ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಅಂತಿಮವಾಗಿ ಪಾಂಡುರಂಗ ತಂಡ ಮತ್ತು ಸಾಯಿರಾಜ್ ಸ್ಪೋರ್ಟ್ಸ್ ತಂಡಗಳು ಫೈನಲ್ ಪ್ರವೇಶಿಸಿದ್ದು, ನಾಳೆ ಅಂದರೆ ಭಾನುವಾರ ಬೆಳಿಗ್ಗೆ 11 ಗಂಟೆಗೆ ಐತಿಹಾಸಿಕ ಸರ್ದಾರ್ ಮೈದಾನದಲ್ಲಿ ಟ್ರೋಫಿಗಾಗಿ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ.

10 ದಿನಗಳಿಂದ ಬೆಳಗಾವಿಯ ಸರ್ದಾರ್ಸ್ ಮೈದಾನದಲ್ಲಿ ನಡೆದ ಮುರುಘೇಂದ್ರಗೌಡ ಪಾಟೀಲ್ ಕ್ರಿಕೆಟ್ ಟೂರ್ನಾಮೆಂಟಿನಲ್ಲಿ ನಾಳೆ ಅಂತಿಮ ಹಣಾಹಣಿಯಿದ್ದು 2 ಪಂದ್ಯಗಳು ನಡೆಯಲಿವೆ. ಬೆಳಗಾವಿಗರು ಇಲ್ಲಿಯ ವರೆಗೂ ಒಳ್ಳೆಯ ಬೆಂಬಲವನ್ನ ಸೂಚಿಸಿದ್ದು, ನಾಳೆಯೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಆಯೋಜಕರಾದ ಮುರುಘೇಂದ್ರಗೌಡ ಪಾಟೀಲ್ ಕರೆ ನೀಡಿದರು.

ಮುರುಘೇಂದ್ರಗೌಡ ಪಾಟೀಲ್ ಅವರು 2026ನೇ ಮುರುಘೇಂದ್ರಗೌಡ ಪಾಟೀಲ್ ಕ್ರಿಕೆಟ್ ಟೂರ್ನಾಮೆಂಟಿನ್ನು ಆಯೋಜಿಸಿದ್ದಾರೆ. ಇಂದು ಸೆಮಿ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಮುರುಘೇಂದ್ರಗೌಡ ಪಾಟೀಲ್ ಅವರ ಕಾರ್ಯವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಯಾದವಾಡ ಅವರು ಶ್ಲಾಘಿಸಿದರು.

ಮಾಜಿ ಶಶಿಕಾಂತ್ ಪಾಟೀಲ್ ಆಲ್ ಇಂಡಿಯಾ ಓಪನ್ ಟೆನ್ನಿಸ್ ಬಾಲ್ ಕ್ರಿಕೆಟ್’ನ್ನು ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜಿಸಿ ಯುವಕರಿಗೆ ಒಂದು ಒಳ್ಳೆಯ ವೇದಿಕೆಯನ್ನು ಮುರುಘೇಂದ್ರಗೌಡ್ ಪಾಟೀಲ್ ಅವರು ನಿರ್ಮಿಸಿದ್ದಾರೆ. ಇದು ರಾಜ್ಯ ಅಂತರ್ ರಾಜ್ಯದ ಕ್ರಿಕೆಟಪಟುಗಳಿಗೆ ಸುವರ್ಣಾಕಾಶವಾಗಿದೆ. ಬೆಳಗಾವಿಯಲ್ಲಿ ರಾಷ್ಟ್ರೀಯಮಟ್ಟದ ಕ್ರೀಡಾಂಗಣವನ್ನು ನಿರ್ಮಿಸಲು ಅವರ ಯೋಗದಾನವು ಅಪ್ರತಿಮವಾಗಿದೆ ಎಂದರು.

ಇಂದಿನ ಪಂದ್ಯದಲ್ಲಿ ಗೆದ್ದು ಅಂತಿಮ ಹಣಾಹಣಿಗೆ ತಲುಪಿದ ತಂಡವನ್ನು ಗಣ್ಯರಿಂದ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.

Tags:

error: Content is protected !!