Vijaypura

ಸಚಿವ ಶಿವಾನಂದ ಪಾಟೀಲ್ ತಾಯಿ ನಿಧನ ಗಣ್ಯರಿಂದ ಅಂತಿಮ ದರ್ಶನ

Share

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಶಾಸಕ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವನಂದ ಪಾಟೀಲ್ ಅವರ ತಾಯಿ ಗಂಗಾಬಾಯಿ ಸಿದ್ದರಾಮಪ್ಪ ಪಾಟೀಲ್ ಅವರು ಭಾನುವಾರ ನಸುಕಿನ ಜಾವ ಐದು ಗಂಟೆ ಸುಮಾರಿಗೆ ನಿಧನರಾ ಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಹಾಗೂ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಸೇರಿದಂತೆ ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ಜಮಖಂಡಿ ರಸ್ತೆಯ ತೋಟದ ಮನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ನಾಡಿನ ಮಠಾಧೀಶರು ಮತ್ತು ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು. ಬಳಿಕ ಸಚಿವರ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಿತು.

Tags:

error: Content is protected !!