gokak

ಪರಿಶಿಷ್ಟ ಜಾತಿ ಜನಾಂಗದವರ ಜಮೀನು ಕಬಳಿಸಿದವರ ವಿರುದ್ದ ಭಾರಿ ಪ್ರತಿಭಟನೆ.

Share

ಖೊಟ್ಟಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿ ಜಮೀನುಗಳನ್ನು ಕಬಳಿಸಿದವರ ವಿರುದ್ದ ಗೋಕಾಕ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಖೊಟ್ಟಿ ದಾಖಲೆ ಸೃಷ್ಟಿಸಿದ ಆನಂದ ಗೊಟಡಕಿ ಮತ್ತು ಸಹಚರರ ಬಾವ ಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿ ಅವರ ವಿರುದ್ದ ಪ್ರತಿಭಟನೆ ಮಾಡಿದರು.

ಕೊಣ್ಣೂರ ಗ್ರಾಮದ ಸರಹದ್ದೆಯಲ್ಲಿ ಬರುವ ಕೊಣ್ಣೂರ ಶಿವಾಪೂರ ಜಮಿನ ಸರ್ವೆ ನಂ : 387/A ದಿಂದ Z ವರೆಗೆ ಜಮೀನುಗಳನ್ನು ಘನ ಸರಕಾರ ಸನ್ 1938ರಲ್ಲಿ ನೀಡಿತ್ತು.

ಜಮೀನಿನ ಮಾಲಿಕರಿಗೆ ಗೊತ್ತಿಲ್ಲದೆ ಬಾಂಡ್ ರೈಟರ್ ಆನಂದ ಗೊಟಡಕಿ ಹಾಗೂ ಅವನ ಸಹಚರರು ಸೇರಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ 4 ಜನ ಜಮೀನುಗಳನ್ನು ತಮ್ಮ ಹೆಸರಲ್ಲಿ ನೊಂದಾಯಿಸಿಕೊಂಡಿದ್ದರು. ಜಮೀನು ವಾಪಸ್ ನೀಡಿ ಆನಂದ ಗೊಟಡಕಿಯನ್ನು ತಕ್ಷಣ ಬಂದಿಸುವಂತೆ ಬಸವೇಶ್ವರ ವೃತ್ತದಿಂದ ತಹಸಿಲ್ದಾರ ಕಚೇರಿ ವರೆಗೆ ಜಮೀನು ಕಳೆದುಕೊಂಡ ನೂರಾರು ನಿರಾಶ್ರಿತರು ಪಾದಯಾತ್ರೆ ಮಾಡುವ ಮೂಲಕ ತಹಸಿಲ್ದಾರಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಜಮೀನು‌ ಕಳೆದುಕೊಂಡ ನಿವೃತ್ತ ಪಿಎಸ್ಐ ಕೆಂಪಣ್ಣಾ ಗುಡಜ ಇವರು ಆಕ್ರೋಶ ವ್ಯಕ್ತಪಡಿಸಿ ಜಮೀನು ಕಬಳಿಸಿದ ಆನಂದ ಗೊಟಡಕಿ ಮೇಲೆ 8 ಪ್ರಕರಣ ದಾಖಲಿದ್ದರು ಸಹ ಜಾರಿ ನಿರ್ದೇಶನಾಲಯದ ಪೋಲಿಸರು ಇನ್ನವರೆಗೂ ಆತನನ್ನು ಬಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಜಮೀನು ಕಳೆದುಕೊಂಡ ದನ್ಯಕುಮಾರ ಮೇಗೇರಿ. ಈಶ್ವರ ಗುಡಜ, ಅಶೋಕ ಲಗಮಪ್ಪಗೋಳ, ಮಂಜುಳಾ ರಾಮಗಾನಟ್ಟಿ ಇವರು ಜಮೀನು ಕಬಳಿಸಿದವರ ವಿರುದ್ದ ಹರಿಹಾಯ್ದು ತಹಸಿಲ್ದಾರ ಇವರು ಆನಂದ ಗೊಟಡಕಿ ಮತ್ತು ಸಹಚರರನ್ನು ಬಂದಿಸಿ ಅವರ ಬಾಂಡ ರೈಟರ್ ಪರವಾನಿಗೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.

ಇಲ್ಲದಿದ್ದರೆ ಮುಂದಿನ ದಿನದಲ್ಲಿ ಜಿಲ್ಕೆಯಾದ್ಯಾಂತ ಹೊರಾಟ ಮಾಡುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶೇಖರ ಕೊಣ್ಣೂರ, ಮಯೂರ ಗುಡಜ, ಶಿವಲಿಂಗ ಮಲ್ಲಪ್ಪಗೋಳ, ಗೊವಿಂದ ಕಳ್ಳಿಮನಿ,ಸಂದರವ್ವಾ ಕಟ್ಟಿಮನಿ ಸೇರಿದಂತೆ ನೂರಾರು ಪರಿಶಿಷ್ಟ ಜಾತಿಯ ನಿರಾಶ್ರಿತರು ಬಾಗಿಯಾಗಿದ್ದರು.

Tags:

error: Content is protected !!