ಕರ್ನಾಟಕ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಮತ್ತು ದಿಶಾ ಫೌಂಡೇಶನ ಸಂಯುಕ್ತಾಶ್ರಯದಲ್ಲಿ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ ಮತ್ತು ನಶಾ ಮುಕ್ತ ಬೆಳಗಾವಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.


ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬೆಳಗಾವಿ ಜಿಲ್ಲಾಧಿಕಾರಿಳಾದ ಮೊಹ್ಮದ್ ರೋಷನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ., ಡಾ. ಅಶೋಕ್ ಶೆಟ್ಟಿ, ಡಾ. ಸೋನವಾಲ್ಕರ್, ಶ್ಯಾಮ ಘಾಟಗೆ ಸೇರಿದಂತೆ ಇನ್ನುಳಿದವು ಜಾಗೃತಿ ರ್ಯಾಲಿಗೆ ಚಾಲನೆಯನ್ನು ನೀಡಿದರು.

ನಂತರ ಡ್ರಗ್ಸ ಮುಕ್ತ ಭಾರತಕ್ಕಾಗಿ ಶಪಥವನ್ನು ಮಾಡಲಾಯಿತು. ರ್ಯಾಲಿಗೂ ಮುನ್ನ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಈಗಾಗಲೇ ಸುಮಾರು 55 ಸಾವಿರ ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ಈ ಅಭಿಯಾನ ವಿಸ್ತರಿಸಿದೆ. 70 ವರ್ಷಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ನೀಡುತ್ತಿದ್ದು, ಜನರ ಸಹಭಾಗಿತ್ವವೆ ಇವುಗಳ ಯಶಸ್ವಿಗೆ ಕಾರಣ. ಮೊದಲೂ ತಮ್ಮ ಕುಟುಂಬದಿಂದಲೇ ಈ ಅಭಿಯಾನ ಆರಂಭಿಸಿದರೇ, ಇಂದು ಪರಿಪೂರ್ಣವಾಗಲೂ ಸಾಧ್ಯ. ಬೆಳಗಾವಿ ಎಸ್ಪಿ-ಕಮಿಷ್ನರ್ ಮತ್ತು ಡಿಸಿ ಅವರ ಶ್ರಮದಿಂದ ಡ್ರಗ್ಸ್ ನಿಯಂತ್ರಣ ಪರಿಣಾಮಕಾರಿಯಾಗಿದೆ. ತಿನ್ನುವ ಪದಾರ್ಥಗಳಲ್ಲಿಯೂ ಕೂಡ ಡ್ರಗ್ಸ್ ಬೆರಕೆ ಪ್ರಕರಣಗಳು ಕೂಡ ಬಂದಿವೆ. ಸರ್ಕಾರ ನಿಮ್ಮೊಂದಿಗಿದೆ. ಜನರು ಜಾಗೃತರಾದಾಗ ಮಾತ್ರ ಇದರನ್ನು ಬೇರು ಸಮೇತ ಕಿತ್ತೊಗೆಯಲು ಸಾಧ್ಯ. ನಶಾ ಮುಕ್ತ ಭಾರತವನ್ನು ಕಟ್ಟೋಣ ಎಂದು ಕರೆ ನೀಡಿದರು.

ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು, ನಶೆಯ ರಸ್ತೆ ಅಂಧಕಾರದಿಂದ ಕೂಡಿದೆ. ಜೀವನದ ಅಪಮಾನವಾಗಿದೆ. ಕನಸನ್ನು ಒಡೆದು ಅಸ್ಥಿತ್ವ ಕಸಿದುಕೊಳ್ಳುವ ಈ ಬಂಧನವನ್ನು ಬನ್ನಿ ಒಟ್ಟಾಗಿ ತೊಡೆದು ಹಾಕಲು ಶಪಥ ಮಾಡೋಣ. ನಮ್ಮದು ನಶೆ ಮುಕ್ತ ದೇಶವಾಗಲೆಂಬುದು ಇಂದಿನ ಶುಭಾಷಯ ಎಂದು ಶಾಯರಿಯ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳು ನಶೆ ಮುಕ್ತ ಭಾರತ ನಿರ್ಮಾಣದ ಸಂದೇಶವನ್ನು ನೀಡಿದರು. ಬೆಳಗಾವಿ ಪೊಲೀಸ್ ತಂಡದವರು ಪ್ರತಿಯೊಂದು ಕಡೆ ನಿಗಾ ವಹಿಸಿ ಸುಮಾರು 700 ಕಿಲೋ ಗಾಂಜಾ ಜಪ್ತಿ ಮಾಡಲಾಗಿದೆ. ಕೆಟ್ಟ ಸಂಗತಿಯನ್ನು ವಿದ್ಯಾರ್ಥಿಗಳು ಬಿಡಬೇಕು. ಶಿಕ್ಷಕರು ಮತ್ತು ಪಾಲಕರ ಪಾತ್ರ ಇದರಲ್ಲಿ ಮಹತ್ವದ್ದಾಗಿದೆ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಅವರು, ವಿದ್ಯಾರ್ಥಿಗಳನ್ನು ಸ್ವಾಸ್ಥ್ಯಪೂರ್ಣ ರಾಷ್ಟ್ರ ನಿರ್ಮಾಣಕ್ಕಾಗಿ ತಯಾರಿಸುವುದು ಮೂಲ ಉದ್ಧೇಶ ಆದರೇ ಇದಕ್ಕೆ ಡ್ರಗ್ಸ್ ಪೀಡಿಗೂ ದೊಡ್ಡ ಅಡ್ಡಿಯಾಗಿದೆ. ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದೆ. ದೇಶದಲ್ಲಿನ ವಿದ್ಯಾರ್ಥಿಗಳು ಈ ಪೆಡಂಭೂತಕ್ಕೆ ಬಲಿಯಾಗುತ್ತಿರುವುದು ಖೇದಕರ. ಆದ್ದರಿಂದ ವಿಶ್ವವಿದ್ಯಾಲಯದಿಂದ ಇದರ ವಿರುದ್ಧ ಜಾಗೃತಿ ಮೂಡಿಸುವ ಬೃಹತ್ ಕಾರ್ಯಕ್ರಮವನ್ನು ದೇಶದಲ್ಲೇ ಪ್ರಥಮ ಬಾರಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವುದು ಹೆಮ್ಮೆ ಸಂಗತಿ. ಪ್ರತಿಯೊಬ್ಬ ವಿದ್ಯಾರ್ಥಿಯ ಪಾತ್ರ ಇದರಲ್ಲಿ ಮಹತ್ತರವಾಗಿದೆ ಎಂದರು.

ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ರ್ಯಾಲಿಯೂ ನೆಹರು ನಗರ, ಕೊಲ್ಹಾಪೂರ ವೃತ್ತ, ಡಾ. ಅಂಬೇಡ್ಕರ್ ರಸ್ತೆ, ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಾಗಿ ಸರ್ದಾರ್ಸ್ ಮೈದಾನದಕ್ಕೆ ತಲುಪಿ ಕೊನೆಗೊಂಡಿತು. ಈ ಜಾಗೃತಿ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ಧರು.

