Chikkodi

ಮಾರ್ಚ 1 ರಿಂದ ಯಡೂರಿನಲ್ಲಿ ಮಹಾಕುಂಭಾಭಿಷೇಕ

Share

ಯಡೂರು ಗ್ರಾಮದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯು ಮಾರ್ಚ 1ರಿಂದ 6 ರವರೆಗೆ ನಡೆಯಲಿದೆ ಯಡೂರ ಶ್ರೀವೀರಭದ್ರ ದೇವಸ್ಥಾನದ ಹಾಗೂ ಧರ್ಮಾಧಿಕಾರಿಗಳು ಶ್ರೀಶೈಲ್ ಜಗದ್ಗುರು ಡಾ! ಚನ್ನಸಿಧ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜೀಯವರು ಹೇಳಿದರು.

ಯಡೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಚ 1 ರಂದು ಸಂಜೆ 6 ಗಂಟೆಗೆ ಶ್ರೀ ಸಿದ್ಧಲಿಂಗ ಶಿವಾಚಾರ್ಯ ವೇದಾಗಮ ಸಂಸ್ಕೃತ ಪಾಠ ಶಾಲೆಯ 12 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜರುಗುವುದು. ಶ್ರೀಶೈಲ ಮತ್ತು ಕಾಶೀ ನೂತನ ಜಗದ್ಗುರುಗಳು, ನಿಡಸೋಸಿ ಹಾಗೂ ಹೊಸಪೇಟೆಯ ಜಗದ್ಗುರುಗಳು ಸಾನಿಧ್ಯ ವಹಿಸುವರು. ಕಡಗಂಚಿ ಹಾಗೂ ಶ್ರೀರಂಗಪಟ್ಟಣದ ಪೂಜ್ಯರು ಸಮ್ಮುಖ ಹಾಗೂ ನೇತೃತ್ವ ಸ್ಥಾನ ಅಲಂಕರಿಸುವರು ಎಂದರು.

ಕರ್ನಾಟಕ ಸರಕಾರದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಅಧ್ಯಕ್ಷತೆ ವಹಿಸುವುದು. ಶ್ರೀಶೈಲ ಕ್ಷೇತ್ರದ ಜನಪ್ರಿಯ ಶಾಸಕ ಬುಡ್ಡಾ ರಾಜಶೇಖರ ರೆಡ್ಡಿ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಅಂಬಿಕಾನಗರದ ಪೂಜ್ಯರಿಗೆ “ಶಿವಾಚಾರ್ಯ ಶಿರೋಮಣಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಮಾರ್ಚ 2 ರಂದು ಸಂಜೆ 6 ಗಂಟೆಗೆ ಧರ್ಮ ಸಮನ್ವಯ ಸಮಾರಂಭ, ಥೀಮ್ ಪಾರ್ಕ್ ಹಾಗೂ ‘ಶ್ರೀ ಕ್ಷೇತ್ರ ಯಡೂರು’ ಕಿರು ಚಿತ್ರದ ಲೋಕಾರ್ಪಣೆ ಕಾರ್ಯಕ್ರಮಗಳು ಜರುಗುವವು. ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಶೈಲ, ಕಾಶೀ ಹಾಗೂ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮಿಗಳು ವಹಿಸುವರು. ಧಾರವಾಡ ಮುರಘಾಮಠದ ಪೂಜ್ಯರು ಉದ್ದೀರ ಹಾಗೂ ಬೆಳಗಾವಿ ಕಾರಂಜಿಮಠದ ಪೂಜ್ಯರು ನೇತೃತ್ವ, ಸಮ್ಮುಖ ಹಾಗೂ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವರು. ಕರ್ನಾಟಕ ಸರಕಾರದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಥೀಮ್ ಪಾರ್ಕ್ ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು “ಶ್ರೀ ಕ್ಷೇತ್ರ ಯಡೂರು” ಕಿರುಚಿತ್ರ ಲೋಕಾರ್ಪಣೆ ಮಾಡುವರು ಎಂದರು.
ಮೌಂಟ ಅಬುದ ರಾಜಯೋಗಿ ಡಾ. ಬಿ.ಕೆ ಮೃತ್ಯುಂಜಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪಂಡರಪುರದ ಶ್ರೀ ವಿಠಲ ಮಹಾರಾಜರು ಶಿವಕೀರ್ತನೆ ಮಾಡುವರು. ಪಂಡಪುರದ ಶ್ರೀ ಸುಭಾಷಮಾಮನೆ ಅವರಿಗೆ “ದಾನವೀರ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಂಗಳೂರಿನ ಖ್ಯಾತ ವೈದ್ಯೆ ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ ಅವರು ವಿಶೇಷ ಉಪನ್ಯಾಸ ನೀಡುವರು.

ದಿ.03 ರಂದು ಸಂಜೆ 6 ಗಂಟೆಗೆ ಶ್ರೀ ಭದ್ರಕಾಳಿ- ವೀರಭದ್ರೇಶ್ವರ ಕಲ್ಯಾಣೋತ್ಸವ ಹಾಗೂ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವದು. ಸುತ್ತೂರು ಜಗದ್ಗುರುಗಳು, ಶ್ರೀಶೈಲ ಹಾಗೂ ಕಾಶಿ ಜಗದ್ಗುರುಗಳು ಸಾನಿಧ್ಯ ವಹಿಸುವರು.
ಕರ್ನಾಟಕ ಸರಕಾರದ ಗಣಿ ಭೂ-ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್. ಎಸ್ ಮಲ್ಲಿಕಾರ್ಜುನ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಆಡಳಿತ ಕಚೇರಿಯ ಲೋಕಾರ್ಪಣೆ ಮಾಡುವರು. ರಾಷ್ಟ್ರೀಯ ಕ್ರಿಕೇಟ್ ತರಬೇತುದಾರರಾದ ಡಾ॥ ಮಹಾಂತೇಶ ಕಿವುಡಸಣ್ಣವರ ಅವರಿಗೆ “ವಿಶ್ವಚೇತನ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಚಿಕ್ಕೋಡಿ ಸಂಸದೆ ಪ್ರಿಯಂಕಾ ಸತೀಶ ಜಾರಕಿಹೊಳಿ, ಮಾಜಿ ಸಚಿವ ಮುರಗೇಶ ನಿರಾಣಿ ಹಾಗೂ ಅ.ಭಾ.ವೀ.ಲಿಂ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಅತಿಥಿಗಳಾಗಿ ಬಾಗವಹಿಸುವರು ಎಂದರು.
ಮಾರ್ಚ 04 ರಂದು ಬೆಳಿಗ್ಗೆ 9:30 ಗಂಟೆಗೆ ಮಹಿಳೆಯರಿಂದ ಬೆಳ್ಳಿ ರಥೋತ್ಸವ ಹಾಗೂ ಗುಗ್ಗುಳೋತ್ಸವ ಮತ್ತು ಪುರವಂತರ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗುವದು. ನೀಲಾಂಬಿಕಾ ಪ್ರಕಾಶ ಹುಕ್ಕೇರಿ ಅವರು ರಥೋತ್ಸವಕ್ಕೆ ಚಾಲನೆ ನೀಡುವರು. ಸಂಜೆ 6 ಗಂಟೆಗೆ ಪುರವಂತರ ಮಹಾಮೇಳ ಹಾಗೂ “ಪುರವಂತ ವೀರ” ಪ್ರಶಸ್ತಿ ಪ್ರದಾನ ಸಮಾರಂಭ ಜರಗುವುದು. ಶ್ರೀಶೈಲ, ಕಾಶೀ ಹಾಗೂ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರುಗಳು ಸಾನಿಧ್ಯ ವಹಿಸುವರು. ಮಾಜಿ ವಿಪಸದಸ್ಯ ಮಹಾಂತೇಶ್ ಕವಟಗಿಮಠ ಉದ್ಘಾಟಿಸುವರು. ತೇರದಾಳದ ಶಾಸಕ ಸಿದ್ದು ಸವದಿ ಬೆಳ್ಳಿ ತೇರಿನ ಮನೆ ಲೋಕಾರ್ಪಣೆಗೊಳಿಸುವರು. ನಾಡಿನ ಹನ್ನೊಂದು ಜನ ಹಿರಿಯ ಪುರವಂತರಿಗೆ “ಪುರವಂತ ವೀರ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಮಾರ್ಚ 5 ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ ಹಾಗೂ ರಾಜಗೋಪುರಗಳ ಲೋಕಾರ್ಪಣೆ ಜರುಗುವದು. ರಂಭಾಪುರಿ, ಉಜ್ಜೆಯನಿ, ಶ್ರೀಶೈಲ ಹಾಗೂ ಕಾಶಿಯ ಉಭಯ ಜಗದ್ಗುರುಗಳು ಸಾನಿಧ್ಯ ಅಲಂಕರಿಸುವರು. ಭಾರತ ಸರಕಾರದ ಘನವೆತ್ತ ಉಪರಾಷ್ಟ್ರಪತಿಗಳಾದ ಸಿ.ಪಿ ರಾಧಾಕೃಷ್ಣನ್ ಅವರು ರಾಜಗೋಪುರಗಳ ಲೋಕಾರ್ಪಣೆ ಮಾಡುವರು. ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲ ಥಾವರ ಚಂದ್ ಗೆಲ್ಲೋಟ್ ಅಧ್ಯಕ್ಷತೆ ವಹಿಸುವರು. ಡಿಸಿಎಂ ಡಿ. ಕೆ ಶಿವಕುಮಾರ ಅವರು ನೂತನ ಯಾತ್ರಿ ನಿವಾಸವನ್ನು ಲೋಕಾರ್ಪಣೆ ಮಾಡುವರು. ಎಂ.ಬಿ. ಪಾಟೀಲ ಉದ್ಘಾಟಿಸುವರು, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಡಾ| ಪ್ರಭಾಕರ ಕೋರೆ ಅವರನ್ನು ಸತ್ಕರಿಸಲಾಗುವುದು. ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರಿಗೆ “ವಿಕಾಸ ವೀರ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಸದ ಜಗದೀಶ ಶೆಟ್ಟರ, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಅತಿಥಿಗಳಾಗಿ ಭಾಗವಹಿಸುವರು ಎಂದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಮಾರ್ಚ 6ರಂದು ಐದು ಸಾವಿರ ಸುಮಂಗಲೆಯರು ಕೃಷ್ಣಾನದಿಯಿಂದ 5000 ಕುಂಭಗಳನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನವನ್ನು ತಲುಪುವರು. ಪಂಚಪೀಠದ ಪರಮಾಚಾರ್ಯರ ಅಮೃತ ಹಸ್ತದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಂಚರಾಜಗೋಪುರಗಳಿಗೆ ಮಹಾಕುಂಭಾಭೀಷೇಕ ಜರಗುವುದು. ಸಂಜೆ6 ಗಂಟೆಗೆ ಕೃಷ್ಣಾರತಿ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗುವುದು.
ಶಿವಮೊಗ್ಗದ ಜನಪ್ರಿಯ ಸಂಸದ ಬಿ.ವೈ ರಾಘವೇಂದ್ರ ಅವರು ಅಧ್ಯಕ್ಷತೆ ವಹಿಸುವರು. ವಿ.ಆರ್.ಎಲ್ ಸಮೂಹದ ಸಂಸ್ಥಾಪಕರಾದ ಪದ್ಮಶ್ರೀ ವಿಜಯ ಸಂಕೇಶ್ವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಿಂದಗಿಯ ಸಾರಂಗದ ಮಠದ ಕಟಕೋಳ ಎಂ ಚಂದರಗಿಯ ಪೂಜ್ಯರು ನೇತೃತ್ವ ಹಾಗೂ ಸಮ್ಮುಖ ಸ್ಥಾನವನ್ನು ಅಲಂಕರಿಸುವರು ಎಂದರು..

ಆರು ದಿನಗಳವರೆಗೆ ನಡೆಯುವ ಈ ಎಲ್ಲ ಕಾರ್ಯಕ್ರಮಗಳಲ್ಲಿ ಜಗದ್ಗುರು ಪಂಚಪೀಠಾಧೀಶ್ವರರು, ಸುತ್ತೂರು ಜಗದ್ಗುರುಗಳಾದಿಯಾಗಿ ವಿರಕ್ತ ಪರಂಪರೆಯ ನಿಡಸೋಸಿ, ಹುಬ್ಬಳ್ಳಿ, ಕೊಟ್ಟೂರು, ಶಿರಹಟ್ಟಿಯ ಪಕೀರೇಶ್ವರ ಮಠದ ಜಗದ್ಗುರುಗಳು ಮತ್ತು ಧಾರವಾಡ ಮುರಘಾಮಠದ ಪೂಜ್ಯರು ಪಾಲ್ಗೊಳ್ಳುವರು. ಬ್ರಾಹ್ಮಣ ಸಂಪ್ರದಾಯದ, ವಾರಕರಿ ಸಂಪ್ರದಾಯದ ನಾಡಿನ ಸುಮಾರು 200 ಹಿರಿಯ ಕಿರಿಯ ಪೂಜ್ಯರು ಪಾಲ್ಗೊಳ್ಳುವರು. ಘನವೆತ್ತ ಉಪರಾಷ್ಟ್ರಪತಿಗಳು, ರಾಜ್ಯಪಾಲರು, ಡಿಸಿಎಂ, 6 ಜನ ಸಚಿವರು, 8 ಜನ ಹಾಲಿ-ಮಾಜಿ ಸಂಸದರು ಹಾಗೂ ಸುಮಾರು 25 ಜನ ಹಾಲಿ-ಮಾಜಿ ಶಾಸಕರು, ಭ್ರಮರಾಂಭ-ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಇದು ಸರ್ವಧರ್ಮ ಕಾರ್ಯಕ್ರಮ ಆಗಿದೆ, ಎಲ್ಲ ಭಕ್ತಾಧಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದರು.ಈ ಎಲ್ಲ ಕಾರ್ಯಕ್ರಮಗಳಿಗೆ ಬರುವ ಭಕ್ತರಿಗೆ ಲಿಂಗೈಕ್ಯ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳ ನೇತೃತ್ವದಲ್ಲಿ ಬಸವಗೋಪಾಲ ನೀಲಮಾಣಿಕ ಮಠದ ಭಕ್ತರಿಂದ ಪ್ರಸಾದ ನಿರ್ಮಾಣ ಹಾಗೂ ವಿತರಣೆಯ ಸೇವೆ ನಡಯಲಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಕಾಂತ ಉಮರಾಣಿ, ರೇಣುಕ ದೇವರು, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅನ್ನದಾನ ಶಾಸ್ರ್ತಿಗಳು,
ಗುರುಸಿಧ್ದ ಶಿವಾಚಾರ್ಯ ಸ್ವಾಮೀಜಿ, ಮಠಪತಿ ಸರ, ಗೌರಿಶಂಕರ ಸ್ವಾಮೀಜಿ, ಅಂಬಿಕಾನಗರ ಶ್ರೀಗಳು, ರೇಣುಕ ಶಾಂತಮಲ್ಲ ಸ್ವಾಮೀಜಿ , ಮುತ್ತಯ್ಯ ತುಬಚಿ ಸೇರಿದಂತೆ ಅನೇಕರು ಇದ್ದರು.

Tags:

error: Content is protected !!