ದೇವರೇ ನನ್ನ ಕಷ್ಟ ದೂರ ಮಾಡು. ನಮ್ಮ ಅತ್ತೆ ಸಾಯಲಿ ಎಂದು ದೇವರಿಗೆ ಹರಕೆ ಹೊತ್ತು ದೇವರ ಹುಂಡಿಗೆ ಪತ್ರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ರಾಯಬಾಗ ತಾಲೂಕಿನ ಖಣದಾಳ ಗ್ರಾಮ ದೇವತೆ ಹುಲಿಕಾಂತೇಶ್ವರ ದೇವರಿಗೆ ಅಪರಿಚಿತ ಮಹಿಳೆ/ಪುರುಷ ಹರಕೆ ಹೊತ್ತು ಹುಂಡಿಗೆ ಚೀಟಿ ಹಾಕಿದ್ದಾರೆ. 100 ರೂ. ಹಾಗೂ 10 ರೂ. ಮುಖಬೆಲೆಯ ನೋಟಿನ ಒಳಗಡೆ ಬಿಳಿಹಾಳೆಯ ಮೇಲೆ ಬರವಣಿಗೆ ಹುಂಡಿ ಎಣಿಸುವ ವೇಳೆ ಶನಿವಾರ ಪತ್ತೆಯಾಗಿದೆ. ಈ ರೀತಿ ಅತ್ತೆ ಕಾಟದಿಂದ ಬೇಸತ್ತ ಸೊಸೆ ಹಾಕಿದ್ದಾಳಾ ಅಥವಾ ಅಳಿಯ ಹಾಕಿದ್ದಾನಾ ಗೊತ್ತಿಲ್ಲ. ಇದೀಗ ಗ್ರಾಮದಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.
