Dharwad

ಉದ್ಯೋಗ ಆಂಕ್ಷಾಂಕ್ಷಿಗಳ ಹೋರಾಟದ ವೇಳೆ ಕಾನೂನು ಮೀರಿ ವರ್ತಿಸಿದವರ ವಿರುದ್ಧ ಕಾನೂನು ಕ್ರಮ- ಎನ್ ಶಶಿಕುಮಾರ.

Share

ಇತ್ತೀಚೆಗೆ ದಾರವಾಡದಲ್ಲಿ ನಡೆದ ಉದ್ಯೋಗ ಆಂಕ್ಷಾಕ್ಷಿಗಳ ಪ್ರತಿಭಟನೆ ವೇಳೆ ಕಾನೂನು ಮೀರಿ ವರ್ತಿಸಿದವರ ಮೇಲೆ ಕಾನೂನು ಕ್ರಮ ಫಿಕ್ಸ್ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ತಿಳಿಸಿದ್ದಾರೆ.‌

ಈ ಕುರಿತು ಧಾರವಾಡದಲ್ಲಿ‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಪ್ರತಿಭಟನೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಹಾಗೂ ಸಾರ್ವಜನಿಕ ಆಸ್ತಿ, ಪಾಸ್ತಿ ಹಾನಿ ಉಂಟು ಮಾಡಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕಾನೂನು ಉಲ್ಲಂಘಿಸುವವರ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಲಾಗಿತ್ತು.

ಆದರೂ ಸಹ ಕೆಲ ಕಿಡಿಗೇಡಿಗಳು ಹದ್ದುಬಸ್ತು ಮೀರಿ ವರ್ತಿಸಿದ್ದಾರೆ. ಮತ್ತು ಮಾರ್ಗ ಬದಲಾವಣೆ ಮಾಡಿದ್ದಾರೆ. ಬಾಟಲ್ ಎಸೆದಿದ್ದಾರೆ. ಅಂತವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಈ ಘಟನೆಯಲ್ಲಿ ರಾಜಕೀಯ ಮುಖಂಡರು ಕುಮ್ಮಕ್ಕು ನೀಡಿರುವುದು ಕಂಡುಬಂದಲ್ಲಿ, ಅವರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Tags:

error: Content is protected !!