kagawad

18 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಆರೋಗ್ಯ ಕೇಂದ್ರದ ಕಾಮಗಾರಿಗಳಿಗೆ ಶಾಸಕ ರಾಜು ಕಾಗೆ ಚಾಲನೆ

Share

ಅಥಣಿ ಕ್ಷೇತ್ರಕ್ಕೆ ಹರಿದು ಬಂದ ವಿಶೇಷ ಅನುದಾನ

18 ಕೋಟಿ ವೆಚ್ಚದ ರಸ್ತೆಗಳಿಗೆ ಚಾಲನೆ

ಗ್ರಾಮೀಣ ಭಾಗದಲ್ಲಿ ಹೈಟೆಕ್ ಆಯುಷ್ಮಾನ್ ಕೇಂದ್ರ

ಗುಣಮಟ್ಟದ ಕಾಮಗಾರಿಗೆ ಶಾಸಕ ರಾಜು ಕಾಗೆ ಸೂಚನೆ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ವಿಶೇಷ ಅನುದಾನದಡಿ, ಮದಭಾವಿ ಮತ್ತು ಅನಂತಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 18 ಕೋಟಿ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

ಮಂಗಳವಾರ ಬೆಳಿಗ್ಗೆ ಶಾಸಕ ರಾಜು ಕಾಗೆ ಅವರು ಸುಣ್ಣದಕೋಟಿಯಿಂದ ಚಿಕ್ಕಲಕಿ ಕ್ರಾಸ್‌ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಮೀಸಲಿಟ್ಟ 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಗಾರಿಗಳು ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮದಭಾವಿ – ಜಂಬಗಿ: ರಸ್ತೆ ಸುಧಾರಣೆಗಾಗಿ 2 ಕೋಟಿ ರೂ.,ಮುರಗುಂಡಿ – ಅರಳಿಹಟ್ಟಿ: ರಸ್ತೆ ನಿರ್ಮಾಣಕ್ಕಾಗಿ 2 ಕೋಟಿ ರೂ., ಅರಳಿಹಟ್ಟಿ – ಜಂಬಗಿ: ರಸ್ತೆ ಸುಧಾರಣೆಗಾಗಿ 2 ಕೋಟಿ ರೂ., ತಾವಂಶಿ – ಕಿರನಗಿ: ರಸ್ತೆ ಸುಧಾರಣೆಗಾಗಿ 4 ಕೋಟಿ ರೂ.ಆರೋಗ್ಯ ಇಲಾಖೆಯ ವತಿಯಿಂದ ತಲಾ 65 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಗ್ರಾಮಗಳಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಶೇಡಬಾಳ ಸ್ಟೇಷನ್, ಮದಭಾವಿ, ಕೆಂಪವಾಡ ಮತ್ತು ಪಾಂಡಿಗಾವ ಗ್ರಾಮಗಳಲ್ಲಿ ಈ ಕೇಂದ್ರಗಳು ನಿರ್ಮಾಣವಾಗಲಿವೆ. ತಾಲೂಕು ಆರೋಗ್ಯಾಧಿಕಾರಿ ಡಾ. ಬಸಗೌಡ ಕಾಗೆ ಅವರ ಸಮ್ಮುಖದಲ್ಲಿ ಪೂಜೆ ನೆರವೇರಿಸಿ, ಗುತ್ತಿಗೆದಾರರಾದ ಅನಿಲ್ ಮನೆ ಅವರಿಗೆ ಕಾಮಗಾರಿಯನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಅರಳಿಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ್, ಖಂಡೇರಾವ ಘೋರ್ಪಡೆ ಸರ್ಕಾರ, ದಲಿತ ಮುಖಂಡ ರಾವಸಾಹೇಬ್ ಐಹೊಳೆ, ಪೂಪಟ್ ನಿಕಮ್, ಆನಂದ್ ಜಾದವ್, ಅಮಸಿದ್ಧ ಪೂಜಾರಿ, ಮಾಯಪ್ಪ ರೋಗಿ, ಹನುಮಂತ ರೋಗಿ, ಕುಮಾರ್ ಮೈತ್ರಿ, ಎಂ.ಆರ್. ಮಗದುಮ್ ಉಪಸ್ಥಿತರಿದ್ದರು.

ಹಾಗೆಯೇ ಗುತ್ತಿಗೆದಾರರಾದ ಶಿವಪ್ರಸಾದ್ ಸಜ್ಜನ್, ಬಿ.ಕೆ. ಮಗದುಮ್, ರಾಜು ಅಳಬಾಳ, ಅನಿಲ್ ಶಿಂದೆ, ಶಿವಪುತ್ರ ನಾಯಕ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!