ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರದ
ವ್ಯಾಪ್ತಿಯಲ್ಲಿ ಭಂಡಾರದ ಜಾತ್ರೆ ಎಂದು ಪ್ರಸಿದ್ಧಿ ಪಡೆದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಶ್ರೀ ಮಲಕಾರಿಸಿದ್ದೇಶ್ವರ-ಅರಣ್ಯಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಂಡಾರ ಹಾರಿಸಿ ಭಕ್ತಿಭಾವ ಮೆರೆದರು.

ಹಂಡ ಕುದುರಿ, ಪುಂಡ ಅರಣ್ಯಸಿದ್ದಗ ಚಂಗಾಭಲೋ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಭಂಡಾರ ಜಾತ್ರೆ ಎಂದು ಪ್ರಸಿದ್ದಿ ಪಡೆದ ಕೇರೂರ ಶ್ರೀ ಮಲಕಾರಿಸಿದ್ದೇಶ್ವರ-ಅರಣ್ಯಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಂಡಾರ ಹಾರಿಸುವ ಮೂಲಕ ಭಕ್ತಿಭಾವ ಮೆರೆದರು.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಕೇರೂರ ಗ್ರಾಮದ ಶ್ರೀ ಮಲಕಾರಿಸಿದ್ದೇಶ್ವರ-ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವವು ಗುರುವಾರ ಅದ್ದೂರಿ ತೆರೆ ಕಂಡಿತು. ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರದ ಭಂಡಾರ ಹಾರಿಸುವ ದೊಡ್ಡ ಜಾತ್ರೆ ಇದಾಗಿದೆ. ಗುರುವಾರ ನಿವ್ವಾಳಕಿ,ದೇವವಾಣಿ ಮದ್ಯಾಹ್ನ ಅಭಿಷೇಕ ಕಾರ್ಯಕ್ರಮ ಮತ್ತು ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಂಡಾರದೊಕಳಿಯಲ್ಲಿ ಮಿಂದೆದ್ದಿರುವುದು ವಿಶೇಷವಾಗಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮೀಸಿ ಶ್ರೀ ಮಲಕಾರಿಸಿದ್ದ ಶ್ರೀ ಅರಣ್ಯಸಿದ್ದೇಶ್ವರ ದೇವರ ದರ್ಶನ ಪಡೆದುಕೊಂಡು ಪುಣಿತರಾದರು.
