BELAGAVI

ಬೆಳಗಾವಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ: ವಿಜಯ್ ಪ್ರಕಾಶ್-ಅನುರಾಧ ಭಟ್ ಗಾಯನಕ್ಕೆ ಕುಣಿದು ಕುಪ್ಪಳಿಸಿದ ಕುಂದಾನಗರಿ!

Share

ಕರ್ನಾಟಕ ರಾಜ್ಯೋತ್ಸವದ ಸಂಭ್ರಮಈ ಬಾರಿ ಬೆಳಗಾವಿಯಲ್ಲಿ ವಿಶಿಷ್ಟ ಸಂಗೀತ ಮಂಜರಿಯಾಗಿ ಅರಳಿತು. ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕನ್ನಡ ಹಬ್ಬ ಸಂಗೀತ ಸಂಜೆ ಕಾರ್ಯಕ್ರಮವು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ, ಕನ್ನಡಿಗರ ಭಾವನೆಗಳ ಮಹಾಸಂಗಮವಾಗಿ ರೂಪುಗೊಂಡಿತು.

ಸಂಜೆ ಹೊತ್ತಿಗೆಲೇ ಕ್ರೀಡಾಂಗಣ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಕುಟುಂಬ ಸಮೇತ ಆಗಮಿಸಿದ್ದ ನಾಗರಿಕರು, ಯುವಜನರು, ಹಿರಿಯರು ಎಲ್ಲರೂ ಒಂದೇ ಸ್ವರದಲ್ಲಿ ಕನ್ನಡ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ವೇದಿಕೆಗೆ ಆಗಮಿಸಿದ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಹಾಗೂ ಗಾಯಕಿ ಅನುರಾಧ ಭಟ್ ಕ್ರೀಡಾಂಗಣದ ವಾತಾವ ರಣವನ್ನೇ ಮಂತ್ರಮುಗ್ಧಗೊಳಿಸಿದರು. ಪ್ರಾರಂಭದಿಂದಲೇ ಜನಪ್ರಿಯ ಚಿತ್ರಗೀತೆ ಗಳ ಸರಮಾಲೆ ಪ್ರೇಕ್ಷಕರ ಮನ ಸೆಳೆದಿತು. ಪ್ರತಿಯೊಂದು ಹಾಡಿಗೂ ಪ್ರೇಕ್ಷಕರು ಕೈತಟ್ಟಿ, ಶಿಳ್ಳೆ ಹೊಡೆದು, ಕೆಲವರು ವೇದಿಕೆ ಯ ಮುಂದೆ ನೃತ್ಯಮಾಡಿ ತಮ್ಮ ಉಲ್ಲಾಸವನ್ನು ವ್ಯಕ್ತಪಡಿಸಿದರು.

ಮಧ್ಯೆ ಮಾತನಾಡಿದ ವಿಜಯ ಪ್ರಕಾಶ ಅವರು, ನಿಮ್ಮ ಪ್ರೀತಿ ನಮ್ಮ ಶಕ್ತಿ. ನಮ್ಮ ಹಾಡಿಗೆ ನೀವೆಲ್ಲರೂ ತಲೆದೂಗಿಸಿ ಕುಣಿ ದದ್ದು ನಮಗೆ ಅತಿ ದೊಡ್ಡಗೌರವ.ಬೆಳಗಾವಿ ಯ ಪ್ರೀತಿ ಸದಾ ನಮ್ಮ ಹೃದಯದಲ್ಲಿ ಉಳಿಯುತ್ತದೆ ಎಂದು ಹೇಳಿದಾಗ ಕ್ರೀಡಾಂಗಣವೇ ಚಪ್ಪಾಳೆಗಳಿಂದ ಗದ್ದಲ ಗೊಳ್ಳಿತು. ಅಭಿಮಾನಿಗಳ ಕೋರಿಕೆಯ ಮೇರೆಗೆ ಹಲವು ಹಾಡುಗಳನ್ನು ವಿಶೇಷವಾಗಿ ಪ್ರಸ್ತುತಪಡಿಸಿದರು.
ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಗೀತೆ ಮೊಳಗುತ್ತಿದ್ದಂತೆಯೇ ಪ್ರೇಕ್ಷಕರು ಒಂದೇ ಸ್ವರದಲ್ಲಿ ಹಾಡಿಗೆ ಜೊತೆಯಾದರು. ಆ ಹಾಡಿನ ಲಯ, ಭಾವ ಮತ್ತು ಕನ್ನಡದ ಸುವಾಸನೆ ಎಲ್ಲರ ಮನಸ್ಸನ್ನು ಮಿಡಿಸಿತು. ಯಾರೇ ಬಂದರು ಎದುರ್ಯಾರೆ ನಿಂತರು, ಪ್ರೀತಿ ಹಂಚುವ ಯಜಮಾನ್ ಎಂಬ ಗೀತೆ ಗೂ ಅಪಾರ ಮೆಚ್ಚುಗೆ ವ್ಯಕ್ತವಾಯಿತು.


ಇದಲ್ಲದೆ ರಾಬರ್ಟ್ ಚಿತ್ರದ ಕಣ್ಣು ಹೊಡಿಯಾಕ್‌ ಹಾಡಿಗೆ ಯುವಕರು ಭರ್ಜ ರಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರುಒಂದು ಮಳೆ ಬಿಲ್ಲು, ಒಂದು ಹನಿ ಮೋಡ್ ಹಾಡು ಮಧುರ ಭಾವನೆಯನ್ನು ಮೂಡಿಸಿ ಕ್ಷಣಕಾ ಲ ಕ್ರೀಡಾಂಗಣದಲ್ಲಿ ನಿಶ್ಯಬ್ದವಾದ ಸೌಂದ ರ್ಯವನ್ನು ತಂದಿತು. ಹಳೆಯ ನೆನಪುಗಳನ್ನು ಮೆಲುಕು ಹಾಕಿಸಿದ ಬೆಸುಗೆ ಚಿತ್ರದ ಬೇಸುಗೆ ಬೇಸುಗೆಗ್ ಗೀತೆ ಹಾಗೂ ಸಿ.ಬಿ.ಐ. ಶಂಕರ್ ಚಿತ್ರದ ಗೀತಾಂಜಲಿ ಹಾಲುಗೆನ್ನೆಗೆ ಹಾಡು ಗಳು ಹಿರಿಯರ ಮನಸ್ಸನ್ನು ತಟ್ಟಿದವು.

ಅಂತ್ಯದಲ್ಲಿ ಜಾನಪದ ಗೀತೆಗಳನ್ನು ಅಖಿಲಾ ಪ್ರಸ್ತುತಪಡಿಸಿ ಜನರನ್ನು ಸಂಭ್ರಮ ದಲ್ಲಿ ತೇಲಿಸಿದರು. ಸಂಪೂರ್ಣ ಕಾರ್ಯಕ್ರ ಮವು ಬೆಳಗಾವಿ ಜನತೆಗೆ ಸ್ಮರಣೀಯ ಅನುಭವವಾಗಿ ಉಳಿಯಿತು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಂಗೀತದ ಸಂಭ್ರಮ ಅರಳಿದ ಈ ಸಂಗೀತ ಸಂಜೆ, ರಾಜ್ಯೋತ್ಸವದ ಅರ್ಥವನ್ನು ಮತ್ತಷ್ಟು ಗಾಢಗೊಳಿಸಿತು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪಾಲಿಕೆ ಆಯುಕ್ತ ಕಾರ್ತಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!