ಜಮೀನುದಾರರ ಮನೆತನದ ಕುಟುಂಬವೊಂದು ಕಳೆದ 63 ವರ್ಷಗಳ ಕಾಲ ಹೋರಾಟ ಮಾಡಿ ತಮ್ಮ ಪಾಲಿನ ಜಮೀನು ಪಡೆದುಕೊಂಡಿದ್ದಾರೆ ಎಂದು ಚಿಕ್ಕೋಡಿ ಪಟ್ಟಣದ ಹಿರಿಯ ವಕೀಲ ಎಸ್.ಡಿ. ಚೌಗಲಾ ಹೇಳಿದರು.


ಚಿಕ್ಕೋಡಿ ಪಟ್ಟಣದಲ್ಲಿ ನಣದಿ ಸರ್ಕಾರ ಎಂಬ ಜಮೀನುದಾರರ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಳೆದ 63 ವರ್ಷಗಳಿಂದ ಚಿಕ್ಕೋಡಿ ವ್ಯಾಜ್ಯವನ್ನು ಸುಪ್ರೀಂಕೋರ್ಟ್‌ವರೆಗೂ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವಲ್ಲಿ ಕುಟುಂಬ ಯಶಸ್ವಿ ಯಾಗಿದೆ. ನಿರಂತರ ಹೋರಾಟ ಮಾಡಿ ನ್ಯಾಯ ಪಡೆದುಕೊಂಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ದಿಲೀಪ ದೇಶಮುಖ ಮಾತನಾಡಿ, 14 ಸಾವಿರ ಎಕರೆ ಜಮೀನು ಇದ್ದರೂ ತಮ್ಮ ಕುಟುಂಬದ ಪಾಲಿಗೆ
ಅರ್ಧದಷ್ಟು ಜಮೀನು ಬರಬೇಕಿತ್ತು. ಆದರೆ ಮೂರು ತಲೆಮಾರುಗಳ 63 ವರ್ಷಗಳ ಕುಟುಂಬದ ಹೋರಾಟಕ್ಕೆ ಉಮರಾಣಿ ಗ್ರಾಮದ 63 ಎಕರೆ, ನಣದಿಯ 23 ಎಕರೆ ಹಾಗೂ ಕೆಂಪಟ್ಟಿಯ 20 ಎಕರೆ ಸೇರಿದಂತೆ ಒಟ್ಟು 106 ಎಕರೆ ಜಮೀನು ದೊರೆತಿದೆ. ಚಿಕ್ಕೋಡಿಯ ಈ ಪ್ರಕರಣ ಸುಪ್ರೀಂ ಕೋರ್ಟ್ ಪ್ರಕಟಿಸಿದ 2.3. ದಾಖಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅನಿಲ ಮಾನೆ, ಧವಲ ದೇಶಮುಖ, ಸಮೀರ ದೇಶಮುಖ, ಆದಿತ್ಯ ದೇಶಮುಖ, ಸೌರಭ ದೇಶಮುಖ, ಅಮಿತ ಪಾಲವ್, ಸೀಮಾ ಇಂಗಳೆ, ನೀತಾ ಪಾಟೀಲ, ಚಿತ್ರಾ ಕಾಟೆ, ಭಾಗ್ಯಶ್ರೀ ನಲವಡೆ, ಶಿವರಾಜ ದೇಶಮುಖ, ಸುಹಾಸ ದೇಶಮುಖ, ಸರಿತಾ ಗಾಡಗೆ, ಮೀರಾ ಸಾವಂತ, ಗೌರವ ದೇಶಮುಖ ಇತರರು ಇದ್ದರು.
