ಬೆಳಗಾವಿಯಲ್ಲಿ ಖಾಸಗಿ ಎಪಿಎಂಸಿ ವಿವಾದ ತಣ್ಣಗಾಗುವ ಬೆನ್ನಲ್ಲೇ ಈಗ ಹೂವಿನ ಮಾರುಕಟ್ಟೆ ಸಂಘರ್ಷ ಶುರುವಾಗಿದೆ. ನಿಯಮಬಾಹಿರವಾಗಿ ಖಾಸಗಿ ಹೂವಿನ ಮಾರುಕಟ್ಟೆ ಸ್ಥಾಪಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಇಂದು ಕ್ಯಾಂಟೋನ್ಮೆಂಟ್ ಬೋರ್ಡ್ ಸಿಇಓ ಮೈದಾನಕ್ಕಿಳಿದು ಬಿಸಿ ಬಿಸಿ ತನಿಖೆ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಖಾಸಗಿ ಎಪಿಎಂಸಿ ಮಾರುಕಟ್ಟೆಯ ವಿವಾದ ಇತ್ಯರ್ಥ್ಯವಾದ ಬೆನ್ನಲ್ಲೇ ಈಗ ಬೆಳಗಾವಿಯಲ್ಲಿ ಖಾಸಗಿ ಹೂವಿನ ಮಾರುಕಟ್ಟೆಯ ವಿವಾದ ಮುನ್ನೆಲೆಗೆ ಬಂದಿದೆ. ಸರಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಅನುಮತಿ ಪಡೆಯದೇ ಬೆಳಗಾವಿಯಲ್ಲಿ ಖಾಸಗಿ ಹೂವಿನ ಮಾರುಕಟ್ಟೆ ಸ್ಥಾಪಿಸಿರುವ ಆರೋಪವನ್ನು ಮಾಡಿದ್ದಾರೆ. ಈ ಹಿನ್ನೆಲೆ ಇಂದು ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಚಲವಾರ ಸುದಾಮಾ ಹರಿವಿಜಯ್ ಅವರು ಎರಡು ಮಾರುಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಈ ವೇಳೆ ಹೂವಿನ ಮಾರುಕಟ್ಟೆಯ ವ್ಯಾಪಾರಸ್ಥರಾದ ಆಯೇಷಾ ಸನದಿ ಅವರು ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದರು.
ರಾಜಕುಮಾರ ಟೋಪಣ್ಣವರ ಮಾತನಾಡಿ ದಂಡು ಮಂಡಳಿ ಸಿಇಓ ಅವರೊಂದಿಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಮಾರುಕಟ್ಟೆಗಳಿಗೆ ವಿರುದ್ಧವಾಗಿ ಖಾಸಗಿ ಮಾರುಕಟ್ಟೆಗಳಿಗೆ ಅವಕಾಶವಿಲ್ಲವೆಂಬುದನ್ನು ಸಿಇಓ ಅವರ ಗಮನಕ್ಕೆ ತರಲಾಗಿದೆ. ಈ ಕುರಿತು ಅಧ್ಯಯನ ನಡೆಸುವುದಾಗಿ ಹೇಳಿದ್ದಾರೆ. ಬೆಳಗಾವಿ ಭೂಯಿಕೋಟ್ ಕಿಲ್ಲಾಗೆ ಸುಮಾರು 1000 ವರ್ಷದ ಇತಿಹಾಸವಿದೆ. 10 ವರ್ಷದ ಹಿಂದೆ ಆದಾಯ ತೆರಿಗೆ ಕಾರ್ಯಾಲಯ ನಿರ್ಮಿಸುವುದನ್ನು ಕೂಡ ತಡೆ ಹಿಡಿಯಲಾಗಿತ್ತು. ಕರ್ನಾಟಕ ಪುರಾತತ್ವ ಇಲಾಖೆ ನಿಯಮಬಾಹಿರವಾಗಿ ಅನುಮತಿ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದರು.
ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಚಲವಾರ ಸುದಾಮಾ ಹರಿವಿಜಯ್ ಅವರು ಕೋಟೆ ಕೆರೆಯ ಪ್ರದೇಶದಲ್ಲಿ ಖಾಸಗಿ ಹೂವಿನ ಮಾರುಕಟ್ಟೆ ನಿರ್ಮಾಣಗೊಂಡಿರುವ ದೂರು ಬಂದಿದೆ. ಈ ಹಿನ್ನೆಲೆ ಖಾಸಗಿ ಮತ್ತು ಸರ್ಕಾರಿ ಎರಡು ಮಾರುಕಟ್ಟೆಯಲ್ಲಿ ಪರಿಶೀಲನೆಯನ್ನು ನಡೆಸಲಾಗಿದೆ. ಎಲ್ಲವನ್ನು ಕೂಲಂಕೂಷವಾಗಿ ಪರಿಶೀಲಿಸಿ ವರದಿ ಪಡೆದ ಬಳಿಕ ಯಾರಿಗೂ ತೊಂದರೆಯಾಗದಂತೆ ಜನಹಿತದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸುಜೀತ್ ಮುಳಗುಂದ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
