Vijaypura

ಸುಕ್ಷೇತ್ರ ಕಡಪಟ್ಟಿಯಲ್ಲಿ ಮಹಾಶಿವರಾತ್ರಿ ಸಡಗರ: ಪವಾಡ ಬಸವೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಿದ ಮಾಜಿ ಶಾಸಕ ಆನಂದ ನ್ಯಾಮಗೌಡ

Share

ಜಮಖಂಡಿ ತಾಲ್ಲೂಕಿನಲ್ಲಿ ಶಿವರಾತ್ರಿಯ ಭಕ್ತಿ ಸಂಭ್ರಮ
ಕಡಪಟ್ಟಿ ಬಸವಣ್ಣನಿಗೆ ರುದ್ರಾಭಿಷೇಕ, ವಿಶೇಷ ಪೂಜೆ
ಮಾಜಿ ಶಾಸಕ ಆನಂದ ನ್ಯಾಮಗೌಡ ಭಾಗಿ
ಪವಾಡ ಬಸವೇಶ್ವರ ಸನ್ನಿಧಿಯಲ್ಲಿ ಭಕ್ತರ ಸಾಗರ

ನಾಡಿನೆಲ್ಲೆಡೆ ಇಂದು ಮಹಾಶಿವರಾತ್ರಿಯ ಭಕ್ತಿ ಪರಾಕಾಷ್ಠೆ ಮನೆಮಾಡಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸುಕ್ಷೇತ್ರ ಕಡಪಟ್ಟಿ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಶಿವನಾಮ ಸ್ಮರಣೆ ಮೊಳಗುತ್ತಿದ್ದು, ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಐತಿಹಾಸಿಕ ಕಡಪಟ್ಟಿ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಬಸವೇಶ್ವರನಿಗೆ ವಿವಿಧ ದ್ರವ್ಯಗಳಿಂದ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಕ್ಷೇತ್ರದ ಮಹಿಮೆಯನ್ನು ಸ್ಮರಿಸುತ್ತಾ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಪವಾಡ ಬಸವೇಶ್ವರನ ದರ್ಶನ ಪಡೆದರು. ಇಡೀ ದೇವಸ್ಥಾನದ ಆವರಣವು ಶಿವನಾಮದ ಜೈಕಾರ ಮತ್ತು ಧಾರ್ಮಿಕ ವಿಧಿವಿಧಾನಗಳಿಂದ ಕಳೆಗಟ್ಟಿದೆ.
ಈ ಪವಿತ್ರ ದಿನದಂದು ಕಾಂಗ್ರೆಸ್ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ರುದ್ರಾಭಿಷೇಕದಲ್ಲಿ ಪಾಲ್ಗೊಂಡರು. ಪೂಜೆಯ ನಂತರ ಮಾತನಾಡಿದ ಅವರು, “ಪವಾಡ ಬಸವೇಶ್ವರನ ಕೃಪೆಯಿಂದ ನಾಡಿನಲ್ಲಿ ಸಮೃದ್ಧ ಮಳೆ-ಬೆಳೆಯಾಗಲಿ ಹಾಗೂ ಜಮಖಂಡಿ ಕ್ಷೇತ್ರದ ಜನತೆಗೆ ಸುಖ-ಶಾಂತಿ ಸಿಗಲಿ” ಎಂದು ಹಾರೈಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮದ ಮುಖಂಡರು ಹಾಗೂ ನೂರಾರು ಶಿವಭಕ್ತರು ಉಪಸ್ಥಿತರಿದ್ದು, ಹಬ್ಬದ ಸಂಭ್ರಮ

Tags:

error: Content is protected !!