BELAGAVI

ಇನ್ ನ್ಯೂಸ್ ಸಂಪಾದಕ ರಾಜಶೇಖರ್ ಪಾಟೀಲರ ಹುಟ್ಟುಹಬ್ಬದ ಸಡಗರ: ಕೇಕ್ ಕತ್ತರಿಸಿ ಶುಭಕೋರಿದ ಸಮಾಜಸೇವಕ ಅರುಣ್ ಮುಚ್ಚಂಡಿಕರ

Share

ಉತ್ತರ ಕರ್ನಾಟಕದ ಜನಪ್ರಿಯ ಸುದ್ದಿವಾಹಿನಿ ‘ಇನ್ ನ್ಯೂಸ್’ನ ಸಾರಥಿ, ಹಿರಿಯ ಪತ್ರಕರ್ತ ರಾಜಶೇಖರ್ ಪಾಟೀಲ್ ಅವರ ಜನ್ಮದಿನವನ್ನು ಇಂದು ಅಭಿಮಾನಿಗಳು ಮತ್ತು ಗಣ್ಯರು ಸಡಗರದಿಂದ ಆಚರಿಸಿದರು. ಇನ್ ನ್ಯೂಸ್ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಮಾಜಸೇವಕರು ಹಾಗೂ ಹಿತೈಷಿಗಳು ಕೇಕ್ ಕತ್ತರಿಸುವ ಮೂಲಕ ಶುಭ ಹಾರೈಸಿದರು.

ವಿವಿಧ ಭಾಷಿಕರ ಮೆಚ್ಚುಗೆಯ ಧ್ವನಿಯಾಗಿ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ದನಿಯಾಗುತ್ತಿರುವ ‘ಇನ್ ನ್ಯೂಸ್’ ಸುದ್ದಿವಾಹಿನಿಯ ಸಂಪಾದಕರಾದ ರಾಜಶೇಖರ್ ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಇಂದು ಕಾರ್ಯಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಮಾಜಸೇವಕ ಅರುಣ್ ಮುಚ್ಚಂಡಿಕರ ಅವರ ನೇತೃತ್ವದಲ್ಲಿ ಗಣ್ಯರ ತಂಡವು ಕಾರ್ಯಾಲಯಕ್ಕೆ ಭೇಟಿ ನೀಡಿ, ರಾಜಶೇಖರ್ ಪಾಟೀಲ್ ಅವರನ್ನುಗೌರವಿಸಿತು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿ ಜನ್ಮದಿನದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣಾ ಪಾಟೀಲ್, ಸ್ನೇಹಲ್ ಪಾಟೀಲ್, ಶೀತಲ್ ಮುಚ್ಚಂಡಿಕರ ಹಾಗೂ ಪುಂಡಲೀಕ ಅಷ್ಟೇಕರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ರಾಜಶೇಖರ್ ಪಾಟೀಲ್ ಅವರ ಪತ್ರಿಕೋದ್ಯಮದ ಸೇವೆಯನ್ನು ಶ್ಲಾಘಿಸಿದರು. ಸುದ್ಧಿವಾಹಿನಿಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಮತ್ತು ಅವರ ಮಾರ್ಗದರ್ಶನ ಸಮಾಜಕ್ಕೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.

Tags:

error: Content is protected !!