BELAGAVI

ಬಜೆಟ್ ವಿಶ್ಲೇಷಣೆಯಲ್ಲಿ ಮಿಂಚಿದ ಕೆಎಲ್‌ಎಸ್ ಐಎಂಇಆರ್ ವಿದ್ಯಾರ್ಥಿಗಳು

Share

ಬೆಳಗಾವಿಯ ಪ್ರತಿಷ್ಠಿತ ಕೆಎಲ್‌ಎಸ್ ಐಎಂಇಆರ್ (IMER) ಸಂಸ್ಥೆಯಲ್ಲಿ ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಅಂತರ್-ಮೆಂಟರ್ ವಿಶ್ಲೇಷಣಾ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಆರ್ಥಿಕ ವಿದ್ಯಮಾನಗಳ ವಿಶ್ಲೇಷಣಾ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯಲ್ಲಿ, ಹಿರಿಯ ಮತ್ತು ಕಿರಿಯ ವಿಭಾಗದ ಒಟ್ಟು 13 ತಂಡಗಳು ಉತ್ಸಾಹದಿಂದ ಭಾಗವಹಿಸಿ ಬಜೆಟ್‌ನ ವಿವಿಧ ಆಯಾಮಗಳನ್ನು ಪ್ರಸ್ತುತಪಡಿಸಿದವು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಶ್ರೀರಂಗ ದೇಶಪಾಂಡೆ ಸ್ಪರ್ಧೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರೆ, ಸಂಸ್ಥೆಯ ನಿರ್ದೇಶಕರಾದ ಡಾ. ಆರೀಫ್ ಶೇಖ್ ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

ಈ ಬೌದ್ಧಿಕ ಕಸರತ್ತಿನ ತೀರ್ಪುಗಾರರಾಗಿ 25 ವರ್ಷಗಳ ಅನುಭವ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ವಿನಾಯಕ ಅಸುಂಡಿ ಹಾಗೂ ಐಎಂಇಆರ್ ಸಂಸ್ಥೆಯ ಹಳೆಯ ವಿದ್ಯಾರ್ಥಿ ಮತ್ತು 18 ವರ್ಷಗಳ ಅನುಭವವಿರುವ ಕಂಪನಿ ಸೆಕ್ರೆಟರಿ ವಿಕ್ರಮ್ ಮದ್ದೇಣ್ಣವರ ಆಗಮಿಸಿ ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಿದರು. ಸ್ಪರ್ಧೆಯಲ್ಲಿ ರುತಿಕಾ ಕೊಲ್ಹಾಪುರೆ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿ 3,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಸಾಕ್ಷಿ ಜಾಧವ್ ತಂಡ ದ್ವಿತೀಯ (2,500 ರೂ.) ಹಾಗೂ ಭಾಗ್ಯಶ್ರೀ ಖಡಬಡಿ ತಂಡ ತೃತೀಯ (1,500 ರೂ.) ಬಹುಮಾನ ಪಡೆದರು. ಇವರಲ್ಲದೆ ಇತರ ಮೂರು ತಂಡಗಳಿಗೆ ತಲಾ 1,000 ರೂಪಾಯಿಗಳ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

Tags:

error: Content is protected !!