ಅದೇಷ್ಟೋ ಯುವಕರು ಎಲ್ಲ ಅಂಗಾಗಗಳು ಸರಿಯಾಗಿದ್ದರು ಸಾಧನೆ ಮಾಡಲು ಆಗುವುದಿಲ್ಲ. ಅಂತರದಲ್ಲಿ ಇಲ್ಲೋಬ್ಬರು ವಿಶೇಷಚೇತ ಯುವಕ ಹೊರ ರಾಜ್ಯದಲ್ಲಿ ನಡೆದ ವಿಶೇಷಚೇತನರ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ತನ್ನದಾಗಿಸಿಕೊಳ್ಳುವ ಮೂಲಕ ರಾಜ್ಯ ಸೇರಿ ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ.

ಹೌದು..ಕಳೆದ ಎರಡು ದಿನಗಳ ಹಿಂದೇ ತೆಲಂಗಾಣದ ಕರೀಮ ನಗರದಲ್ಲಿ ವಿಶೇಷ ಚೇತನರ ದೇಹದಾಡ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕ, ತೆಲಂಗಾಣ ಸೇರಿ ಅಕ್ಕಪಕ್ಕದ ರಾಜ್ಯದ ದಿವ್ಯಾಂಗ್ ಬಾಡಿ ಬಿಲ್ಡರ್ ಗಳು ಭಾಗವಹಿಸಿ ತಮ್ಮ ಕಟ್ಟುಮಸ್ತಾದ ದೇಹ ಪ್ರದರ್ಶನ ಮಾಡಿದರು. ಈ ಸ್ಪರ್ಧೆಯಲ್ಲಿ ಧಾರವಾಡ ತೇಜಸ್ವಿ ನಗರದ ಹುಸೇನ್ ಜಮಾದರ ಭಾಗವಹಿಸಿ 4ನೇ ಸ್ಥಾನ ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಇನ್ನೂ ಹುಸೇನ್‌ಗೆ ತಂದೆ ತಾಯಿ ಇಲ್ಲ ಎಂದು ತಿಳಿದು ಬಂದಿದ್ದು, ಇತನ ಸಾಧನೆಯನ್ನು ಸ್ಥಳೀಯರು ಗೌರವಿಸುತ್ತಿದ್ದಾರೆ. ಹುಸೇನ್ ಸೊಂಟದ ಕೆಳಗ ಭಾಗ ಶಕ್ತಿ ಇಲ್ಲದಿದ್ದರೂ ಈ ತನ್ನ ಸಮಸ್ಯೆ ಮೆಟ್ಟಿ ನಿಂತು ಸಾಧನೆಗೆ ಛಲ ಹಾಗೂ ಸಾಧಿಸುವ ಗುರಿಯೊಂದೇ ಮುಖ್ಯ ಎನ್ನುವುದುನ್ನು ತೋರಿಸಿದ್ದಾರೆ. ಹುಸೇನ್ ಸಾಧನೆಗೆ ನಮ್ಮ ಕಡೆಯಿಂದಲೂ ಸಲಾಂ ಹೇಳುತ್ತಾ, ಇನ್ನಷ್ಟು ಮತ್ತಷ್ಟು ಸಾಧನೆ ಮಾಡುವ ಆರೋಗ್ಯ ಇವರಿಗೆ ಸಿಗಲಿ ಎಂದು ಹಾರೈಸೋಣ. ಜತೆಗೆ ದುಷ್ಟ ಚಟಗಳಿಂದ ದೂರವಿದ್ದು, ಯುವ ಸಮುದಾಯ ಇಂತಹ ಸಾಧನೆಗಳ ಕಡೆ ಮುಖ ಮಾಡಬೇಕಾಗಿದೆ.
