Belagavi

ಸಂಕೇಶ್ವರ ನಗರದಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ಓರ್ವ ಗಂಬೀರ ಗಾಯ

Share

• ಸಂಕೇಶ್ವರದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ.
• ಆರ್.ಎಸ್.ಎಸ್ ಕಾರ್ಯಕರ್ತನಿಗೆ ತಲ್ವಾರ್‌ನಿಂದ ಇರಿತ.
• ಕಾರ್‌ನಲ್ಲಿ ಬಂದು ಅಟ್ಟಹಾಸ ಮೆರೆದ ದುಷ್ಕರ್ಮಿಗಳು.
• ಎಸ್ಪಿ ಕೆ. ರಾಮರಾಜನ್ ಅವರಿಂದ ಸ್ಥಳ ಪರಿಶೀಲನೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಯಾಗಿ ಶ್ರೀಕಾಂತ ಥೂರವತ್ ಎಂಬ ಯುವಕ ಗಂಭೀರ ಗಾಯಗೊಂಡ ಘಟನೆ ಜರುಗಿದೆ.
ಪಟ್ಟಣದ ನಿಡಸೋಸಿ ರಸ್ತೆಯ ಆದರ್ಶ ನಗರದ ಸಾಯಿ ಕಲ್ಯಾಣ ಮಂಟಪದ ಹತ್ತಿರ ದ್ವಿ ಚಕ್ರ ವಾಹನ ಮೇಲೆ ಹೋಗುತ್ತಿದ್ದ ಶ್ರೀಕಾಂತ ಥೂರವತ್ ಎಂಬ 40 ವರ್ಷದ ಯುವಕನ ಮೇಲೆ ಯಾರೋ ದುಷ್ಕರ್ಮಿಗಳು ಕಾರು ಮೂಲಕ ಬಂದು ತಲ್ವಾರ ನಿಂದ ಹಲ್ಲೆ ಮಾಡಿ ಭೀರ ಗಾಯಗೋಳಿಸಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಂಕೇಶ್ವರ ಪೋಲಿಸರು ಗಾಯಾಳು ಶ್ರೀಕಾಂತನನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ಧಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಪಕ್ಕದ ಮಹಾರಾಷ್ಟ್ರ ರಾಜ್ಯದ ಗಡಿಂಗ್ಲಜ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,
ಹಲ್ಲೆಗೋಳಗಾದ ಯುವಕ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಕಾರ್ಯಕರ್ತನಾಗಿದ್ದು ಹಾಗೂ ಇತ್ತಿಚಿಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದನು ಎನ್ನಲಾಗಿದೆ.
ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಪೋಲೀಸರು ಪತ್ತೆ ಹಚ್ಚಿ ದಾಳಿಗೆ ಕಾರಣ ತಿಳಿಯಬೇಕಾಗಿದೆ.
ಈ ಕುರಿತು ಶ್ರೀಕಾಂತನ ಆಪ್ತ ಸ್ನೇಹಿತ ಪಿಂಟು ಪರೀಟ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ನಿಡಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಬೆಳಗಾವಿ ಪೋಲಿಸ್ ವರಿಷ್ಟಾಧೀಕಾರಿ ಕೆ ರಾಮರಾಜನ್ ಭೇಟಿ ನೀಡಿ ದುಷ್ಕರ್ಮಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ.

Tags:

error: Content is protected !!