hubbali

ಹುಬ್ಬಳ್ಳಿಯಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರಿಗೆ ಗೌರವ ಸನ್ಮಾನ

Share

ಹುಬ್ಬಳ್ಳಿ ನಗರದ ಶತಮಾನೋತ್ಸವದ ಸ್ಮರಣಾರ್ಥ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರಿಗೆ ‘ಶತಮಾನೋತ್ಸವದ ನೆನಪಿನ ನೀಡಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುನಿಲ್ ಜೋಶಿ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಅವಿನಾಶ್ ವೈದ್ಯ, ವೀರಣ್ಣ ಸವಡಿ, ಅಲ್ತಾಫ್ ಕಿತ್ತೂರು, ದಯಾನಂದ ಶೆಟ್ಟಿ ಹಾಗೂ ವಸಂತ ಮುರ್ಡೇಶ್ವರ ಉಪಸ್ಥಿತರಿದ್ದು, ಜೋಶಿ ಅವರ ಸಾಧನೆಯನ್ನು ಶ್ಲಾಘಿಸಿದರು. ಸ್ಥಳೀಯ ಕ್ರೀಡಾಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭವು ಅತ್ಯಂತ ಸಂಭ್ರಮದಿಂದ ಕೂಡಿತ್ತು.

Tags:

error: Content is protected !!