BELAGAVI

ಹಾವೇರಿ ಸಮಾವೇಶ ಅಪ್ಪಟ ಸುಳ್ಳಿನ ಕಂತೆ, ಇದು 60% ಕಮಿಷನ್ ಸರ್ಕಾರ: ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ವಾಗ್ದಾಳಿ!

Share

ಸಾವಿರ ದಿನದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ದಿನವನ್ನು ಹಾವೇರಿಯಲ್ಲಿ ಮಾಡುತ್ತಿರುವ ಸಮಾವೇಶ ಮಾಡುತ್ತಿರುವುದು ಸುಳ್ಳಿನ ಸಮಾವೇಶ ಎಂದು ಬಿಜೆಪಿ‌ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ವಾಗ್ದಾಳಿ‌ ನಡೆಸಿದರು.

ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಗೃಹ ಲಕ್ಷ್ಮೀ ಯೋಜನೆಯ 50 ಸಾವಿರ ಕೋಟಿ ರೂ. ಬಾಕಿ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಮುಡಾ ಹರಣದ ತನಿಖೆ ಎದುರಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸಿದ್ದರಾಮಯ್ಯನವರೇ ಆರೋಪ ಹೊತ್ತಿರುವ ಮುಡಾ ಹಗರಣ, ವಾಲ್ಮೀತಿ ನಿಗಮದ 187 ಕೋಟಿ ಹಣ ಲೂಟಿ, ಮತ್ತು ಈಗ ಸಾಂಸ್ಥಿಕಗೊಳಿಸಲಾಗಿದೆ. ಮುಖ್ಯಮಂತ್ರಿ 15,568 ಕೋಟಿ ಮೌಲ್ಯದ ಸ್ಮಾರ್ಟ್ ಮೀಟರ್ ಹಗರಣವು ಈ ಸರ್ಕಾರವನ್ನು ಭ್ರಷ್ಟಾಚಾರದ ಅಡ್ಡೆಯನ್ನಾಗಿಸಿದೆ ಎಂದರು.

ಅಬಕಾರಿ ಇಲಾಖೆಯ ಇತ್ತೀಚಿನ ಅಡಿಯೋ ಲೀಕ್‌ನಲ್ಲಿ ಅಧಿಕಾರಿಗಳು ಸಚಿವರಿಗೆ ನೀಡಲು ಕೋಟ್ಯಂತರ ರೂಪಾಯಿ ಲಂಚ ಕೇಳುತ್ತಿರುವುದು ಬಹಿರಂಗವಾಗಿದ್ದು, ಕಾಂಗ್ರೆಸ್ ಸರ್ಕಾರದ ವಸೂಲಿಯ ದಂಧೆ ಅನಾವರಣಗೊಂಡಿದೆ.
ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕ ಸತೀಶ್ ಸೈಲ್ ಮತ್ತು ವೀರೇಂದ್ರ ಪಪ್ಪಿ ಅವರಂತಹ ಪ್ರಮುಖ ಕಾಂಗ್ರೆಸ್ ನಾಯಕರು ಜೈಲುಪಾಲಾಗಿದ್ದು, ಈ ಸರ್ಕಾರವು ಭ್ರಷ್ಟರ ಅಡ್ಡೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಗುತ್ತಿಗೆದಾರರು ಈ ಆಡಳಿತವನ್ನು “60% ಕಮಿಷನ್ ಸರ್ಕಾರ” ಎಂದು ಬಹಿರಂಗವಾಗಿ ಹೀಯಾಳಿಸಿದ್ದು, ಪ್ರತಿ ಕಾಮಗಾರಿಯ ಬಿಲ್ ಪಾಸ್ ಮಾಡಲು ಲಂಚ ನೀಡಲೇಬೇಕಾದ ಅನಿವಾರ್ಯತೆಯನ್ನು ರಾಜ್ಯದಲ್ಲಿ ಸೃಷ್ಟಿಸಲಾಗಿದೆ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.
ರಮೇಶ ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!