Accident

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ: ನಿಪ್ಪಾಣಿ ಮೂಲದ ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ!

Share

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಯಮಕನಮರಡಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಲಾರಿಗೆ ಗೂಡ್ಸ್ ಆಟೋ ಡಿಕ್ಕಿಯಾದ ಪರಿಣಾಮ, ಆಟೋದಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತ ಪ್ರವೀಣ ಬಾಳಾಸೊ ಖೋತ ಮತ್ತು ಗಾಯಾಳು ಉತ್ತಮ ಬಾಳಾಸೊ ಖೋತ ಅವರು ಗೂಡ್ಸ್ ಆಟೋದಲ್ಲಿ ಬೆಳಗಾವಿ ಕಡೆಯಿಂದ ಪುಣೆ ಕಡೆಗೆ ತೆರಳುತ್ತಿದ್ದರು. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪೂರ ಕ್ರಾಸ್ ಬಳಿಯ ಪೆಟ್ರೋಲ್ ಪಂಪ್ ಹತ್ತಿರ ಬರುತ್ತಿದ್ದಂತೆ, ರಸ್ತೆಯ ಮೇಲೆ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಲಾಗಿದ್ದ ಗೂಡ್ಸ್ ಟ್ರೇಲರ್‌ಗೆ ಆಟೋ ವೇಗವಾಗಿ ಡಿಕ್ಕಿ ಹೊಡೆದಿದೆ. ಮೈಸೂರು ಮೂಲದ ವೀಣಾ ಎ.ಎಲ್. ಅವರು ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಆಟೋ ಮತ್ತು ಸಂಬಂಧಪಟ್ಟ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಅಜಾಗರೂಕತೆಯಿಂದ ಲಾರಿ ನಿಲ್ಲಿಸಿ ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿರುವ ಟ್ರೇಲರ್ ಪತ್ತೆಗಾಗಿ ಪೊಲೀಸರು ಈಗ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Tags:

error: Content is protected !!