gokak

ಉನ್ನತಿಕರಿಸಿದ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ ಸಿಗಬೇಕು: ಶಾಸಕ ರಮೇಶ ಜಾರಕಿಹೋಳಿ.

Share

ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಹೆಚ್ಚಾಗಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆಂದು ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಗೋಕಾಕ ತಾಲೂಕಿನ ದುಪಧಾಳ ಗ್ರಾಮದಲ್ಲಿ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ

ಉನ್ನತಿಕರಿಸಿದ ಸರಕಾರಿ ಪ್ರೌಡಶಾಲೆ ಉದ್ಘಾಟನೆ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ದೂಪಧಾಳ ವಾರ್ಷಿಕ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು.

ಸ್ಥಳಿಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಕೆಲವು ವಿಷಯಗಳನ್ನು ವೇದಿಕೆ ಮೇಲೆ ಮಾತನಾಡಲು ಬರುವುದಿಲ್ಲ ,ದುಪಧಾಳ ಸರಕಾರಿ ಶಾಲೆಯಲ್ಲಿ ಎಸ್,ಎಸ್,ಎಲ್,ಸಿ, ವರೆಗೆ ಉನ್ನತಿಕರಿಸುವುದು ಬಹಳ ದಿನಗಳ ಬೇಡಿಕೆಯಾಗುತ್ತು, ಈಗ ಅದು ನನಸಾಗಿದೆ ಇದರ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಹೇಳಿದರು.

ಈ ಸಂದರ್ಬದಲ್ಲಿ ಉನ್ನತಿಕರಿಸಿದ ವರ್ಗಕ್ಕೆ ತೆರಲಕುವ ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಸಕ ರಮೇಶ ಜಾರಕಿಹೋಳಿ ಇವರು ಶುಭ ಹಾರೈಸಿದರು.

ಇವತ್ತಿನ ಕಾರ್ಯಕ್ರಮದ ವೇದಿಕೆ ಮೇಲೆ ಘಟಪ್ರಭಾದ ಗುಬ್ನಲಗುಡ್ಡಮಠ ಶ್ರೀಗಳಾದ ಶ್ರೀ ರೇಣುಕಾಚಾರ್ಯ ಮಹಾಸ್ವಾಮಿಗಳು, ಚಿದಾನಂದ ಮಹಾಸ್ವಾಮಿಗಳು, ಬಿಸಿಯೂಟ ಅಧಿಕಾರಿ ಎಮ್,ಡಿ,ಮಲಬನ್ನವರ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್,ವಿ, ಕುಲಕರ್ಣಿ, ಸಿಆರ ಸಿ ಬಸೀರ ಅಹ್ಮದ ಪಿರಜಾದೆ, ಘಟಪ್ರಭಾ ಪುರಸಭೆ ಮುಖ್ಯಾಧಿಕಾರಿ ಎಮ್,ಎಸ್,ಪಾಟೀಲ, ಪ್ರೌಡಶಾಲೆ ಮುಖ್ಯ ಗುರುಗಳಾದ ಸುಭಾಸ ಮಲ್ಲಾಪುರೆ ಸೇರಿದಂತೆ ದುಪಧಾಳ ಗ್ರಾಮಸ್ಥರು, ಸ್ಥಳಿಯ ಸರಕಾರಿ ಶಾಲೆಯ ಸರ್ವ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

Tags:

error: Content is protected !!