Belagavi

ಸೌಂಡ್ ಬಾಕ್ಸ್ ಹಾಕಿಕೊಂಡು ಕಿರಿಕಿರಿ ನೀಡುತ್ತಿದ್ದ ಟ್ರ್ಯಾಕ್ಟರ್‌ಗಳಿಗೆ ಪೊಲೀಸರ ಬಿಸಿ; ಸಾರ್ವಜನಿಕರ ದೂರಿಗೆ ಪಿಎಸ್‌ಐ ಖಡಕ್ ಆಕ್ಷನ್!

Share

• ಟ್ರ್ಯಾಕ್ಟರ್ ಚಾಲಕರಿಗೆ ಗೋಕಾಕ್ ಪೊಲೀಸರ ಶಾಸ್ತಿ
• ಕಿವಿಗೆ ಕಿರಿಕಿರಿ ನೀಡುತ್ತಿದ್ದ ಸೌಂಡ್ ಬಾಕ್ಸ್ ಮುಟ್ಟುಗೋಲು
• ಪಿಎಸ್ಐ ಕಿರಣ್ ಮೊಹಿತೆಯಿಂದ ಖಡಕ್ ಕಾರ್ಯಾಚರಣೆ
• ಸಾರ್ವಜನಿಕರಿಗೆ ತೊಂದರೆ ನೀಡಿದ್ರೆ ಕಾನೂನು ಕ್ರಮ
ಟ್ರ್ಯಾಕ್ಟರ್‌ಗಳಲ್ಲಿ ಅತಿಯಾದ ಸೌಂಡ್ ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕರಿಗೆ ಗೋಕಾಕ ನಗರ ಪಿ,ಎಸ್, ಐ, ಕಿರಣ ಮೊಹಿತೆಯವರು ಬೆಳಗಾವಿ ಎಸ್,ಪಿ,ಯವರ ಆದೇಶ ಡಿಎಸಪಿ ಯವರ ನಿರ್ದೇಶನ ಸಿಪಿಅಯ್ ಇವರ ಮಾರ್ಗದರ್ಶನದಂತೆ ಬಿಸಿ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಗೋಕಾಕ ನಗರದ್ಯಾದಂತ ಸುತ್ತಮುತ್ತಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಪ್ರಕ್ರಿಯೆ ಆರಂಭ ಇರುವುದರಿಂದ ಜಮೀನಿನಿಂದ ಕಾರ್ಖಾನೆಗೆ ಕಬ್ಬು ಒಯ್ಯುವ ಟ್ರ್ಯಾಕ್ಟರ್‌ಗಳಲ್ಲಿ ಚಾಲಕರು ವಿಪರೀತ ಸೌಂಡ್ ಬಳಸ್ತಿದ್ದಾರೆ. ಜಾನಪದ ಹಾಡುಗಳನ್ನು ಹಚ್ಚಿ ಅಧಿಕ ಸೌಂಡ್‌ನೊಂದಿಗೆ ಚಾಲಕರು ಕಬ್ಬು ಒಯ್ಯುತ್ತಿದ್ದಾರೆ.

ಗೋಕಾಕ ಪಟ್ಟಣದಲ್ಲಿ ಟ್ರ್ಯಾಕ್ಟರ್‌ಗಳ ಮೇಲೆ ಗೋಕಾಕ ಪಿಎಸ್,ಐ, ಕಿರಣ ಮೊಹಿತೆ ಇವರು ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿದ್ದಾರೆ. ಟ್ರ್ಯಾಕ್ಟರಗಳಲ್ಲಿ ಅಳವಡಿಸಿದ್ದ ಟೇಪ್‌ಗಳನ್ನು ಕಿತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಾಡಿದ್ದಾರೆ.
ಮುಂದೆ ಸಾರ್ವಜನಿಕರಿಗೆ ತೊಂದರೆ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

Tags:

error: Content is protected !!