ದಿನಾಂಕ :- 6-2 – 2026 ಶುಕ್ರವಾರ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಹಾಗೂ ಅವಾಸ ಫೈನಾನ್ಸಿಯರ ಲಿಮಿಟೆಡ್ ಮತ್ತು ತ್ರಿಗುಣಾ – ಸೈನ್ಸ್ ಆಫ್ ಲಿವಿಂಗ್ ರವರ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತೆ ಬೂಟ್ ಕ್ಯಾಂಪ್ – 2026 ನ್ನು ಆಯೋಜಿಸಲಾಗಿತ್ತು .

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜೆ ನಿಕ್ಕಮ ಎ ಸಿ ಪಿ ಟ್ರಾಫಿಕ್ ಬೆಳಗಾವಿ ರವರು ವಾಹನ ಚಲಾಯಿಸುವಾಗ ವ್ಯಕ್ತಿಗಳು ತಮ್ಮ ಪ್ರಾಣ ಹಾಗೂ ತಮ್ಮ ಕುಟುಂಬದ ಭದ್ರತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸವಾರರು ತಮ್ಮ ರಕ್ಷಣೆ ಮಾತ್ರವಲ್ಲದೇ ತಮ್ಮ ಇಡಿ ಕುಟುಂಬದ ರಕ್ಷಣೆಯ ಹೊಣೆ ತಮ್ಮ ಮೇಲೆ ಇರುತ್ತದೆ ಎಂಬುದನ್ನು ಅರಿಯಬೇಕು. ಅಜಾಗರೂಕತೆ ಹಾಗೂ ಅವಿವೇಕತನದಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು.

ಮಹಾಂತೇಶ ಮಿರ್ಜಿ ಪಿ ಎಸ್ ಐ ದಕ್ಷಿಣ ಸಂಚಾರ ಬೆಳಗಾವಿ ರವರು ಮಾತನಾಡಿ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ, ವೇಗದ ಚಾಲನೆ, ಮಧ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವುದು ರಸ್ತೆ ಅಪಘಾತಗಳಿಗೆ ಮೂಲ ಕಾರಣಗಳಾಗಿವೆ. ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುತ್ತಿದೆಂದು ಹೇಳಿ TMC (ಟ್ರಾಫಿಕ್ ಮ್ಯಾನೆಜಮೆಂಟ್ ಕಮಿಟಿ) ಕಾರ್ಯ ನಿರ್ವಹಿಸುವ ಪ್ರಕ್ರಿಯೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಲಕ್ಷ್ಮಿಕಾಂತ ಗುರವ ಅಧ್ಯಕ್ಷರು ಮಹಾಂತೇಶ ನಗರ ರಹವಾಸಿಗಳ ಸಂಘ ರವರು ಮಾತನಾಡಿ ಇಂದಿನ ಯುವಜನತೆ ರಸ್ತೆ ನಿಯಮಗಳನ್ನು ಪಾಲಿಸದೇ ಅನಾವಶ್ಯಕವಾಗಿ ತಮ್ಮ ಜೀವ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರವೆಂದು ಕಳವಳ ವ್ಯಕ್ತಪಡಿಸಿದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ರಸ್ತೆ ಸುರಕ್ಷತೆ ಕುರಿತು ಕಿರು ನಾಟಕ ಪ್ರದರ್ಶಿಸಿದರು.
ಎಂ.ಎನ್.ಆರ್.ಎ ಮತ್ತು ಸಿ.ಟಿ.ಇ, ಸಾಗರ ಮತ್ತು ಕೆ.ಎಸ್.ಆರ್ ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರಿಗೆ 250 ಹೆಲ್ಮೆಟಗಳನ್ನು ಉಚಿತವಾಗಿ ವಿತರಿಸಲಾಯಿತು.

ವೇದಿಕೆ ಮೇಲೆ ಶ್ರೀ ಸಂಜೀತ ಎಸ್ ಪಟ್ಟಣಶೆಟ್ಟಿ ಗೌರವ ಕಾರ್ಯದರ್ಶಿ ಮಹಾಂತೇಶ ನಗರ ರಹವಾಸಿಗಳ ಸಂಘ , ಡಾ.ನಿರ್ಮಲಾ ಬಟ್ಟಲ ಪ್ರಾಚಾರ್ಯರು ಮಹಾಂತೇಶ ನಗರ ರಹವಾಸಿಗಳ ಸಂಘ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ, ಶ್ರೀ ಶಶಿಧರ ರಾಜ್ಯ ಮುಖ್ಯಸ್ಥ ಅವಾಸ ಫೈನಾನ್ಸಿಯರ್ಸ್ ಲಿಮಿಟೆಡ್, ಮಿಸ್ ಅನುಷ್ಕಾ ದಾಸ ಕಾರ್ಯಕ್ರಮ ನಿರ್ವಾಹಕರು, ಶ್ರೀ ಅತುಲ ಕೃಷ್ಣ ಸಹಾಯಕ ನಿರ್ವಾಹಕರು ತ್ರಿಗುಣಾ, ಶ್ರೀ ದೀಪಕ ಬ್ರಾಂಚ ಹೆಡ್ ಅವಾಸ ಫೈನಾನ್ಸಿಯರ್ಸ್ ಲಿಮಿಟೆಡ್ , ಸ್ಥಳಿಯ ಅವಾಸ ಫೈನಾನ್ಸಿಯರ್ಸ್ ಲಿಮಿಟಿಡನ ಸಿಬ್ಬಂದಿಗಾದ ಶ್ರೀ ಮಾರುತಿ (ಹೆಚ ಆರ್ ಅವಾಸ ಫೈನಾನ್ಸಿಯರ್ಸ) , ಶ್ರೀ ಮಲ್ಲಿಕಾರ್ಜುನ ಹಾಗೂ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಪ್ರಿಯಾಂಕಾ ಅನಗೋಳಕರ ಪ್ರಾರ್ಥಿಸಿದರು.
ಡಾ. ನಿರ್ಮಲಾ ಜಿ ಬಟ್ಟಲ ಪ್ರಚಾರ್ಯರು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ಟಾಗತಿಸಿದರು.
ಪ್ರೊ.ರೂಪಾ ಅಕ್ಕಿ ಹಾಗೂ ಪ್ರೊ. ತೆಹಸಿನ ಶಿರಗುಪ್ಪಿ ಅವರು ನಿರೂಪಿಸಿದರು.
